alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ಕೃತ್ಯವೆಸಗಿದ್ದಾರಂತೆ ನಟ, ಮಾಡೆಲ್ ಆರೋಪ

ಬೆಂಗಳೂರು: ಮಾಡೆಲ್ ಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಿರುತೆರೆ ನಟರೊಬ್ಬರ ವಿರುದ್ಧ ದೂರು ದಾಖಲಾಗಿದೆ. ನಟ ಕೂಡ ಪ್ರತಿ ದೂರು ನೀಡಿದ್ದಾರೆ.

ಕನ್ನಡದ ಧಾರಾವಾಹಿ ನಟರಾಗಿರುವ ಕಿರಣ್ ರಾಜ್, ಮುಂಬೈಗೆ ಮಾಡೆಲ್ ಕರೆದುಕೊಂಡು ಹೋಗಿ ಕಾರಿನಲ್ಲಿ ಹಲ್ಲೆ ಮಾಡಿದ್ದಾರೆ. ಕಿರಣ್ ರಾಜ್ ಮಾರಣಾಂತಿಕ ಹಲ್ಲೆ ಮಾಡಿ, ಅಕ್ರಮ ಬಂಧನದಲ್ಲಿಟ್ಟಿರುವುದಾಗಿ ಆರೋಪಿಸಿ ಮಾಡೆಲ್ ಮುಂಬೈನ ಒಶಿವಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಿರಣ್ ರಾಜ್ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಬೆಂಗಳೂರ ಆರ್.ಆರ್. ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಡೆಲ್ ಮೇಲೆ ಹಲ್ಲೆ ಮಾಡಿಲ್ಲ. ಆಕೆಯೇ ತಮ್ಮ ಪೋಷಕರ ಹಲ್ಲೆ ನಡೆಸಿ, ಗೃಹಬಂಧನದಲ್ಲಿಡಲು ಪ್ರಯತ್ನ ನಡೆಸಿರುವುದಾಗಿ ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...