alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಪ್ರಕರಣ: ಮಿಥುನ್ ಚಕ್ರವರ್ತಿ ಮಗನಿಗೆ ಸಿಗಲಿಲ್ಲ ಜಾಮೀನು

ಮದುವೆಗೆ 7 ದಿನ ಮೊದಲು ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯ್ ಚಕ್ರವರ್ತಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಜುಲೈ 6 ರಿಂದ ಮಹಾಕ್ಷಯ್ ಮದುವೆ ಕಾರ್ಯಕ್ರಮ ಶುರುವಾಗಲಿದ್ದು, ಸಂಗೀತ ಕಾರ್ಯಕ್ರಮಕ್ಕೆ ಒಂದು ದಿನ ಮೊದಲು ಮಿಥುನ್ ಚಕ್ರವರ್ತಿ ಕುಟುಂಬಕ್ಕೆ ಕಹಿ ಸುದ್ದಿ ಸಿಕ್ಕಿದೆ.

ಬಾಂಬೆ ಹೈ ಕೋರ್ಟ್ ಮಹಾಕ್ಷಯ್ ಹಾಗೂ ಯೋಗಿತಾ ಜಾಮೀನು ಅರ್ಜಿಯನ್ನು ನಿರಾಕರಿಸಿದೆ. ದೆಹಲಿ ರೋಹಿಣಿ ಕೋರ್ಟ್ ಮಹಾಕ್ಷಯ್ ಹಾಗೂ ಯೋಗಿತಾ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಕೋರ್ಟ್ ತೀರ್ಪಿನ ನಂತ್ರ ಮಹಾಕ್ಷಯ್ ಹಾಗೂ ತಾಯಿ ಯೋಗಿತಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಮಹಾಕ್ಷಯ್ ಹಾಗೂ ಯೋಗಿತಾ ಬಂಧನ ಭಯದಿಂದ ಜಾಮೀನು ಅರ್ಜಿ ಸಲ್ಲಿಸಿದ್ದರು. ಪೊಲೀಸರ ಮುಂದಿನ ನಡೆ ಏನೆಂಬುದು ಇನ್ನೂ ಹೊರ ಬಿದ್ದಿಲ್ಲ. ಮಹಾಕ್ಷಯ್ ನನ್ನು ಪೊಲೀಸರು ಬಂಧಿಸ್ತಾರಾ ಇಲ್ಲ ಜುಲೈ 7 ರಂದು ನಡೆಯುವ ಮಹಾಕ್ಷಯ್ ಮದುವೆ ನಿಲ್ಲಿಸ್ತಾರಾ ಎಂಬುದು ಸ್ಪಷ್ಟವಾಗಿಲ್ಲ. ಭೋಜ್ಪುರಿ ನಟಿ ಮಹಾಕ್ಷಯ್ ವಿರುದ್ಧ ಅತ್ಯಾಚಾರ ಹಾಗೂ ಗರ್ಭಪಾತದ ದೂರು ದಾಖಲಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...