alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಆರೋಪ ಹೊತ್ತ ಮಗನಿಗೆ ಶೀಘ್ರ ಮದುವೆ ಮಾಡುವ ತಯಾರಿಯಲ್ಲಿ ನಟ

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯನ ಮದುವೆ ಮುರಿದು ಬಿದ್ದಿದೆ. ದೆಹಲಿ ರೋಹಿಣಿ ಕೋರ್ಟ್ ಮಹಾಕ್ಷಯ ಹಾಗೂ ಮಿಥುನ್ ಚಕ್ರವರ್ತಿ ಪತ್ನಿಗೆ ಜಾಮೀನು ನೀಡಿದೆ. ಆದ್ರೆ ಮದುವೆ ನಿಗಧಿತ ಸಮಯಕ್ಕೆ ನಡೆಯಲಿಲ್ಲ.

ಶನಿವಾರ ತಡವಾಗಿ ಬೇಲ್ ಪ್ರತಿ ಸಿಕ್ಕಿದ್ದರಿಂದ ಮದುವೆಯನ್ನು ಮುಂದೂಡಲಾಯ್ತು ಎಂದು ಮಹಾಕ್ಷಯನ ವಕೀಲರು ಹೇಳಿದ್ದಾರೆ. ಹೊಟೇಲ್ ನಲ್ಲಿ ಮದುವೆಗೆ ಎಲ್ಲ ಸಿದ್ಧತೆ ನಡೆದಿತ್ತಂತೆ. ಆದ್ರೆ ಜಾಮೀನಿನ ಪ್ರತಿ ತಡವಾಗಿ ಸಿಕ್ಕಿದ್ದರಿಂದ ಮದುವೆ ನಿಲ್ಲಿಸಲಾಯ್ತು. ಶೀಘ್ರದಲ್ಲಿಯೇ ಇನ್ನೊಂದು ಮುಹೂರ್ತ ಫಿಕ್ಸ್ ಮಾಡಲಾಗುವುದು ಎಂದು ಮೂಲಗಳು ಹೇಳಿವೆ. ಇದೇ ತಿಂಗಳ ಕೊನೆಯೊಳಗೆ ಮದುವೆ ನಡೆಯುವ ಸಾಧ್ಯತೆಯಿದೆ.

ರೋಹಿಣಿ ಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಪೀಡಿತೆ ಮುಂದಾಗಿದ್ದಾಳೆ. ಸೋಮವಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಇದು ಎರಡು ವರ್ಷಗಳ ಹಿಂದಿನ ಪ್ರಕರಣ. ಲಿವ್ ಇನ್ ನಲ್ಲಿದ್ದ ಮಹಾಕ್ಷಯ್ 2 ವರ್ಷಗಳ ಹಿಂದೆಯೇ ಸಂಬಂಧ ಕಡಿದುಕೊಂಡಿದ್ದಾನೆ. ಈವರೆಗೆ ಸುಮ್ಮನಿದ್ದ ಪೀಡಿತೆ ಈಗ ದೂರು ನೀಡಿದ್ದಾಳೆ. ಇದ್ರಲ್ಲಿ ಮಹಾಕ್ಷಯ್ ಯಾವುದೇ ತಪ್ಪು ಮಾಡಿಲ್ಲವೆಂದು ವಕೀಲರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...