alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಥುನ್ ಚಕ್ರವರ್ತಿ ಮಗನ ವಿರುದ್ಧ ದಾಖಲಾಯ್ತು ಅತ್ಯಾಚಾರ ಕೇಸ್

ಹಿರಿಯ ನಟ ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯನ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಮದುವೆಗೆ 5 ದಿನ ಮೊದಲು ಮಹಾಕ್ಷಯ ವಿರುದ್ಧ ಅತ್ಯಾಚಾರ, ಮೋಸ, ಬಲವಂತವಾಗಿ ಗರ್ಭಪಾತ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ರೋಹಿಣಿ ಕೋರ್ಟ್ ಮಹಾಕ್ಷಯ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಆದೇಶ ಮಾಡಿದೆ. ಮಿಥುನ್ ಪತ್ನಿ ಯೋಗಿತಾ ವಿರುದ್ಧ ಮಗನಿಗೆ ಬೆಂಬಲ ನೀಡಿದ್ದಕ್ಕೆ ಸಹ ಆರೋಪಿಯೆಂದು ದೂರು ದಾಖಲಿಸಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

ಮಹಾಕ್ಷಯ ಹಾಗೂ ಯೋಗಿತಾ ವಿರುದ್ಧ ಬೇಗಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಮಹಾಕ್ಷಯ ಹಾಗೂ ಯೋಗಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೂರು ನೀಡಿದವಳು ಭೋಜ್ಪುರಿ ಚಿತ್ರ ನಟಿ ಎನ್ನಲಾಗಿದೆ. ಬಾಲಿವುಡ್ ನಲ್ಲಿ ಕೂಡ ಆಕೆ ನಟಿಸಿದ್ದಳು ಎನ್ನಲಾಗಿದೆ.

ಮಹಾಕ್ಷಯ್ ಮದುವೆಯಾಗುವುದಾಗಿ ಆಸೆ ತೋರಿಸಿ ಅನೇಕ ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದನಂತೆ. ಈಗ ಬೇರೆಯವರನ್ನು ಮದುವೆಯಾಗಲು ಮುಂದಾಗಿದ್ದಾನೆಂದು ಪೀಡಿತೆ ಆರೋಪ ಮಾಡಿದ್ದಾಳೆ. ಈ ಬಗ್ಗೆ ಪೀಡಿತೆ ಕೋರ್ಟ್ ನಲ್ಲಿ ದೂರು ನೀಡಿದ್ದಳು. 4 ವರ್ಷಗಳ ಕಾಲ ಸಂಬಂಧದಲ್ಲಿದ್ದ ಮಹಾಕ್ಷಯ್ ಜಾತಕ ಕೂಡ ಕೇಳಿದ್ದ. ಒಮ್ಮೆ ಗರ್ಭಪಾತ ಮಾಡಿಸಿದ್ದ. ಈಗ ಬೇರೆಯವಳನ್ನು ಮದುವೆಯಾಗ್ತಿದ್ದಾನೆಂದು ದೂರಿದ್ದಳು. ಪೀಡಿತೆ ಭೋಜ್ಪುರಿಯ 12 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳಂತೆ. ಸಿನಿಮಾ ಸೆಟ್ ನಲ್ಲಿಯೇ ಇಬ್ಬರಿಗೂ ಪರಿಚಯವಾಗಿತ್ತಂತೆ. ಚಿತ್ರ ನಿರ್ಮಾಪಕ ಸುಭಾಷ್ ಶರ್ಮಾ ಮಗಳು ಮದಾಲಸಾ ಜೊತೆ ಜುಲೈ 7 ರಂದು ಮಹಾಕ್ಷಯ್ ಮದುವೆ ನಿಶ್ಚಯವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...