alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಯಾರ್ಕ್ ನಲ್ಲಿ ನಡೆಯಲಿದೆ ‘ಮಿಸ್ ಟಿಬೆಟ್’ ಸ್ಪರ್ಧೆ

ಭಾರತದಲ್ಲಿನ ಟಿಬೆಟಿಯನ್ ಸಮುದಾಯದವರಿಗಾಗಿ ಹಿಮಾಚಲ ಪ್ರದೇಶದ ಮೆಕ್ ಲಿಯೋಡ್ಗಂಜ್ ನಲ್ಲಿ 2002 ರಿಂದಲೂ ನಡೆಯುತ್ತಿದ್ದ ‘ಮಿಸ್ ಟಿಬೆಟ್’ ಸೌಂದರ್ಯ ಸ್ಪರ್ಧೆಯನ್ನು ಈ ಬಾರಿ ನ್ಯೂಯಾರ್ಕ್ ನಲ್ಲಿ ನಡೆಸಲಾಗುತ್ತದೆ.

‘ಮಿಸ್ ಟಿಬೆಟ್’ ಸ್ಪರ್ಧೆಯಲ್ಲಿ ಬಿಕಿನಿ ರೌಂಡ್ ನಡೆಸುತ್ತಿರುವುದಕ್ಕೆ ಹಿರಿಯ ಟಿಬೆಟಿನ್ನಿಯರೂ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

‘ಮಿಸ್ ಟಿಬೆಟ್’ ಸೌಂದರ್ಯ ಸ್ಪರ್ಧೆಯ ಆಯೋಜಕ ಲಾಬ್ ಸಂಗ್ ವಾಂಗೇಲ್ ಮಾತನಾಡಿ 2003, 2005, 2013 ಹಾಗೂ 2014 ರಲ್ಲಿ ಕೇವಲ ಓರ್ವರೇ ಸ್ಪರ್ಧೆಯಾಗಿ ಪಾಲ್ಗೊಂಡಿದ್ದು, 2017 ರಲ್ಲಿ 9 ಮಂದಿ ಸ್ಪರ್ಧಿಗಳಿದ್ದರು. ದಿನೇ ದಿನೇ ಇದು ಜನಪ್ರಿಯತೆ ಪಡೆಯುತ್ತಿದ್ದು, ಈ ಸ್ಪರ್ಧೆಯ ಮೂಲಕ ಟಿಬೆಟಿಯನ್ ಸಮುದಾಯ ವಿಶ್ವಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತಾಗಿದೆ ಎಂದಿದ್ದಾರೆ.

ಸ್ಪರ್ಧೆಗೆ ಮನರಂಜನಾ ಕ್ಷೇತ್ರದ ಸಂಸ್ಥೆಯೊಂದು ಕೈ ಜೋಡಿಸಿದೆ ಎನ್ನಲಾಗಿದ್ದು, 2017 ರ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್ ಟಿಬೆಟ್’ ಆಗಿ ಕರ್ನಾಟಕದ ಕೊಳ್ಳೇಗಾಲದ 21 ವರ್ಷದ ಟೆನ್ಜಿನ್ ಪಾಲ್ಡೋನ್ ಆಯ್ಕೆಯಾಗಿದ್ದರು. ಈ ಬಾರಿಯ ಸೌಂದರ್ಯ ಸ್ಪರ್ಧೆಗೆ ಆನ್ ಲೈನ್ ಅಪ್ಲಿಕೇಷನ್ ಗಳನ್ನು ಪಡೆಯುತ್ತಿದ್ದು, ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...