alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ರನ್ನು ಮನೆಯಿಂದ ಆಚೆ ಕಳಿಸಿದ್ಲು ಪತ್ನಿ ಯಾಕೆ ಗೊತ್ತಾ?

ಶಾಹಿದ್ ಕಪೂರ್ ಹಾಗೂ ಮೀರಾ ರಜ್ಪೂತ್ ದಂಪತಿ ಬಾಲಿವುಡ್ ನ ಸ್ಟಾರ್ ಜೋಡಿಗಳಲ್ಲೊಂದು. ಫ್ಯಾಷನ್ ಈವೆಂಟ್, ಪಾರ್ಟಿ, ಫಂಕ್ಷನ್ ಗಳಲ್ಲಿ ಶಾಹಿದ್-ಮೀರಾ ಎಲ್ಲರ ಗಮನಸೆಳೆಯುತ್ತಾರೆ.  ಇವರು ನಿಜಕ್ಕೂ ಮೇಡ್ ಫಾರ್ ಈಚ್ ಅದರ್ ಎನ್ನುತ್ತಾರೆ ಅಭಿಮಾನಿಗಳು.

ಆದ್ರೆ ಮೀರಾ ಒಮ್ಮೆ ಶಾಹಿದ್ ರನ್ನು ಮನೆಯಿಂದ್ಲೇ ಹೊರಕ್ಕೆ ಹಾಕಿದ್ದರಂತೆ. ಅಚ್ಚರಿಯಾದ್ರೂ ಇದು ಸತ್ಯ. ನೇಹಾ ಧೂಪಿಯಾ ಶೋನಲ್ಲಿ ಖುದ್ದು ಮೀರಾ ಈ ವಿಚಾರ ಬಹಿರಂಗಪಡಿಸಿದ್ದಾರೆ. ಹಾಗಂತ ಶಾಹಿದ್-ಮೀರಾ ಜಗಳವಾಡಿಕೊಂಡಿದ್ದಾರೆ ಅಂತೆಲ್ಲಾ ಊಹಿಸಿಕೊಳ್ಳಬೇಡಿ.

ಶಾಹಿದ್ ಆಗ ಪದ್ಮಾವತ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ರು. ರಾತ್ರಿಯಿಡೀ ಚಿತ್ರೀಕರಣದಲ್ಲಿ ಪಾಲ್ಗೊಂಡು ಬೆಳಗ್ಗೆ 8ಕ್ಕೆ ಶಾಹಿದ್ ಮನೆಗೆ ಬರುತ್ತಿದ್ದಂತೆ. ಮಧ್ಯಾಹ್ನ 2 ಗಂಟೆವರೆಗೂ ನಿದ್ದೆ ಮಾಡುತ್ತಿದ್ರು. ಆದ್ರೆ ಮಗಳು ಮಿಶಾ ಆಗಿನ್ನೂ 1 ವರ್ಷದ ಮಗು.

ಅವಳ ಆಟ ಪಾಠ ಜೋರಾಗಿತ್ತು. ಇದರಿಂದ ಶಾಹಿದ್ ನಿದ್ದೆಗೆ ತೊಂದರೆಯಾಗುತ್ತದೆ ಅನ್ನೋದನ್ನು ಅರ್ಥಮಾಡಿಕೊಂಡ ಮೀರಾ, ಶಾಹಿದ್ ರನ್ನು ಮನೆಯಿಂದ ಆಚೆ ಕಳಿಸಿದ್ದರಂತೆ. ಪದ್ಮಾವತ್ ಶೂಟಿಂಗ್ ಮುಗಿಯುವವರೆಗೂ ಕೆಲ ದಿನಗಳ ಕಾಲ ಶಾಹಿದ್, ಸೆಟ್ ಗೆ ಸಮೀಪದಲ್ಲೇ ಇರುವ ಹೋಟೆಲ್ ನಲ್ಲಿ ತಂಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...