alex Certify
ಕನ್ನಡ ದುನಿಯಾ       Mobile App
       

Kannada Duniya

26 ವರ್ಷದ ಗೆಳತಿ ಕೈ ಹಿಡಿಯಲಿದ್ದಾನೆ 53 ರ ನಟ…!

90ರ ದಶಕದಲ್ಲಿ ಹುಡುಗಿಯರ ಹೃದಯದಲ್ಲಿ ರಾರಾಜಿಸುತ್ತಿದ್ದ ಬಾಲಿವುಡ್ ನಟ ಮಿಲಿಂದ್ ಸೋಮನ್ ಈಗ್ಲೂ ಕಡಿಮೆಯೇನಿಲ್ಲ. ಫಿಟ್ ಆಗಿರುವ ಮಿಲಿಂದ್ ಈಗಿನ ಕಾಲದ ಯುವಕರಿಗೆ ಸ್ಪರ್ಧೆಯೊಡ್ಡುತ್ತಿದ್ದಾರೆ.  ಸದ್ಯ ಮಿಲಿಂದ್ ಬಗ್ಗೆ ಮದುವೆ ಸುದ್ದಿಯೊಂದು ಹರಿದಾಡ್ತಿದೆ. ಮಿಲಿಂದ್ ತನ್ನ ಗೆಳತಿ ಅಂಕಿತಾ ಕುನ್ವಾಲ್ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಮಿಲಿಂದ್ 2018ರಲ್ಲಿ 26 ವರ್ಷ ವಯಸ್ಸಿನ ಗರ್ಲ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ. 53 ವರ್ಷದ ಮಿಲಿಂದ್ 26 ವರ್ಷದ ಹುಡುಗಿ ಜೊತೆ ಡೇಟ್ ಮಾಡುತ್ತಿರುವ ಸಂಗತಿ ಅನೇಕರ ವಿರೋಧಕ್ಕೆ ಕಾರಣವಾಗಿತ್ತು. ಆದ್ರೆ ಮಿಲಿಂದ್ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಅಂಕಿತಾ ಹಾಗೂ ತನ್ನ ನಡುವಿರುವ ಸಂಬಂಧಕ್ಕೆ ಹೆಸರುಕೊಡಲು ಮಿಲಿಂದ್ ಮುಂದಾಗಿದ್ದಾರೆ.

ಕಳೆದ ತಿಂಗಳು ಅಂಕತಾ ತವರು ಗುವಾಹಟಿಗೆ ತೆರಳಿದ್ದ ಮಿಲಿಂದ್ ಅಂಕಿತಾ ಸೋದರಳಿಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಂಕಿತಾ ಕುಟುಂಬಸ್ಥರಿಗೆ ಮಿಲಿಂದ್ ಪರಿಚಯ ಮಾಡಿಸಿದ್ದಾಳೆ ಎನ್ನಲಾಗ್ತಿದೆ. ಇಬ್ಬರೂ 2018ರ ಆರಂಭದಲ್ಲಿಯೇ ಮದುವೆಯಾಗ್ತಾರೆ ಎಂಬ ಸುದ್ದಿ ದಟ್ಟವಾಗಿದೆ. ಆದ್ರೆ ಈ ಬಗ್ಗೆ ಮಿಲಿಂದ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...