alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿ ಚಿಕ್ಕ ವಯಸ್ಸಿನ ಹುಡುಗಿ ಜೊತೆ ಡೇಟಿಂಗ್ ಮಾಡ್ತಿದ್ದಾನೆ ಈ ನಟ

milind

ಸೆಲೆಬ್ರಿಟಿಗಳ ಪ್ರೇಮ ಕಥೆಗಳು ಬಾಲಿವುಡ್ ಸಿನಿಮಾಗಿಂತ ಭಿನ್ನವಾಗಿರೋದಿಲ್ಲ. ಅನೇಕ ಸ್ಟಾರ್ ನಟರು ತಮ್ಮ ಮಕ್ಕಳ ವಯಸ್ಸಿನ ಹುಡುಗಿಯರ ಜೊತೆ ಡೇಟ್ ಮಾಡ್ತಿದ್ದಾರೆ. ಅನುರಾಗ್ ಕಶ್ಯಪ್ ತಮಗಿಂತ 22 ವರ್ಷ ಚಿಕ್ಕ ವಯಸ್ಸಿನ ಹುಡುಗಿ ಪ್ರೀತಿ ಮಾಡುತ್ತಿದ್ದರೆ ನಟ ಮಿಲಿಂದ್ ಸೋಮನ್ ತಮ್ಮ ಅರ್ಧ ವಯಸ್ಸಿನ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ.

ನಟ, ಮಾಡೆಲ್, ಅಥ್ಲಿಟ್ ಮಿಲಿಂದ್ ಸೋಮನ್ ಗೆ ಈಗ 50 ವರ್ಷ. ಮ್ಯಾರಾಥಾನ್ ನಲ್ಲಿ ಹೆಸರು ಮಾಡಿರುವ ಬಾಲಿವುಡ್ ನ ಉತ್ತಮ ನಟ ಮಿಲಿಂದ್ ಸೋಮನ್ ಮತ್ತೆ ಲವ್ ನಲ್ಲಿ ಬಿದ್ದಿದ್ದಾರೆ. ಗಗನ ಸಖಿ ಜೊತೆ ಡೇಟ್ ಮಾಡ್ತಿದ್ದಾರೆ. ಆ ಗಗನ ಸಖಿ ಹೆಸರು ಅಂಕಿತಾ ಕೋನವರ್.

50ರ ಹರೆಯದಲ್ಲಿ ಪ್ರೀತಿಯನ್ನು ಎಂಜಾಯ್ ಮಾಡ್ತಿರುವ ಮಿಲಿಂದ್ ಸೋಮನ್, ಸಾಮಾಜಿಕ ಜಾಲತಾಣದಲ್ಲಿ  ಗರ್ಲ್ ಫ್ರೆಂಡ್ ಜೊತೆಗಿರುವ ಫೋಟೋಗಳನ್ನು ಹಾಕಿದ್ದಾರೆ. ಮಿಲಿಂದ್ ಸೋಮನ್ ಮತ್ತೆ ಮದುವೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

2006ರಲ್ಲಿ ಫ್ರೆಂಚ್ ಸಹನಟಿ Mylene Jampanoi ರನ್ನು ಮಿಲಿಂದ್ ಮದುವೆಯಾಗಿದ್ದರು.2009ರಲ್ಲಿ Mylene Jampanoi ರಿಂದ ವಿಚ್ಛೇದನ ಪಡೆದಿದ್ದರು. ಇದಾದ ನಂತ್ರ 21 ವರ್ಷ ಚಿಕ್ಕವಳಿರುವ ಶಹಾನಾ ಗೋಸ್ವಾಮಿ ಜೊತೆ ಮಿಲಿಂದ್ ಹೆಸರು ಕೇಳಿ ಬಂದಿತ್ತು. ನಾಲ್ಕು ವರ್ಷ ಗೋಸ್ವಾಮಿ ಜೊತೆ ಸುತ್ತಾಡಿದ್ದ ಮಿಲಿಂದ್ ನಂತ್ರ ಸಂಬಂಧ ಕಡಿದುಕೊಂಡಿದ್ದರು. ಈಗ ಮತ್ತೆ ಮಿಲಿಂದ್ ಜೀವನದಲ್ಲಿ ಹೊಸ ಹುಡುಗಿಯ ಆಗಮನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...