alex Certify
ಕನ್ನಡ ದುನಿಯಾ       Mobile App
       

Kannada Duniya

ನಮ್ಮ ಪಾಕಿಸ್ತಾನ ಎಂದ ಗಾಯಕನಿಗೆ ತೀವ್ರ ತರಾಟೆ

mika-twitter_640x480_61501765894

ವಿವಾದಗಳಿಗೂ ಮಿಕಾ ಸಿಂಗ್ ಗೂ ಎಲ್ಲಿಲ್ಲದ ನಂಟು. ಈ ಗಾಯಕ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ನಮ್ಮ ಪಾಕಿಸ್ತಾನ ಅಂತಾ ಉಚ್ಛರಿಸುವ ಮೂಲಕ ಟ್ವಿಟ್ಟರ್ ನಲ್ಲಿ ಎಲ್ಲರ ಕೆಂಗಣ್ಣಿಗೆ ತುತ್ತಾಗಿದ್ದಾರೆ.

ಆಗಸ್ಟ್ 12 ಮತ್ತು 13ರಂದು ಚಿಕಾಗೋ ಹಾಗೂ ಹೋಸ್ಟನ್ ನಲ್ಲಿ ಮಿಕಾ ಸಿಂಗ್ ರ ಶೋ ಏರ್ಪಡಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ವಿವರ ಹಂಚಿಕೊಳ್ಳುವ ಭರದಲ್ಲಿ ಮಿಕಾ ಪಾಕಿಸ್ತಾನವನ್ನು ನಮ್ಮದು ಅಂತಾ ಕರೆದಿದ್ದಾರೆ.

ಆಗಸ್ಟ್ 15ರಂದು ನಮ್ಮ ಹಿಂದೂಸ್ತಾನ ಸ್ವತಂತ್ರವಾಗಿತ್ತು, 14ಕ್ಕೆ ನಮ್ಮ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು ಅಂತಾ ಹೇಳಿದ್ದಾರೆ. ಇದು ಭಾರತೀಯರನ್ನು ಕೆರಳಿಸಿದೆ. ಪಾಕಿಸ್ತಾನ ನಮ್ಮ ಸೈನಿಕರನ್ನು ನಿರಂತರವಾಗಿ ಹತ್ಯೆ ಮಾಡುತ್ತಿದೆ. ಅಂಥದ್ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ನಿಮ್ಮ ಬಗ್ಗೆ ಹೇಸಿಗೆಯಾಗ್ತಿದೆ ಅಂತಾ ಹಲವರು ಟ್ವೀಟ್ ಮಾಡಿದ್ದಾರೆ. ಅನಿವಾಸಿ ಭಾರತೀಯರು ಕೂಡ ಮಿಕಾ ಹೇಳಿಕೆ ಬಗ್ಗೆ ಕಿಡಿಕಾರಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...