alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೆರ್ಸಲ್’ ನಟ ವಿಜಯ್ ಗೆ ಸಂಕಷ್ಟ

ಚೆನ್ನೈ: ‘ಮೆರ್ಸಲ್’ ಚಿತ್ರದಲ್ಲಿ ಜಿ.ಎಸ್.ಟಿ. ಮತ್ತು ಡಿಜಿಟಲ್ ಇಂಡಿಯಾ ಕುರಿತಾಗಿ ಪ್ರಶ್ನಿಸಿದ್ದ ನಟ ವಿಜಯ್ ವಿರುದ್ಧ ಮಧುರೈನಲ್ಲಿ ಕೇಸ್ ದಾಖಲಾಗಿದೆ.

ಚಿತ್ರದಲ್ಲಿ ಡೈಲಾಗ್ ಗಳು ವಿವಾದಕ್ಕೀಡಾಗಿದ್ದು, ಪರ, ವಿರೋಧ ಚರ್ಚೆಗೆ ಗ್ರಾಸವಾಗಿವೆ. ಬಿ.ಜೆ.ಪಿ. ನಾಯಕರು ವಿಜಯ್ ಕುರಿತಾಗಿ ಟೀಕಿಸಿದ್ದರೆ, ಚಿತ್ರರಂಗದಿಂದ ಬೆಂಬಲ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಮಧುರೈನ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ವಿಜಯ್ ವಿರುದ್ಧ ಕೇಸ್ ದಾಖಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು, ದೇವಾಲಯಗಳ ಬಗ್ಗೆ ಚಿತ್ರದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

ವಿವಾದದ ಬಗ್ಗೆ ಡಿ.ಎಂ.ಕೆ. ಪ್ರತಿಕ್ರಿಯೆ ನೀಡಿದ್ದು, ಬಿ.ಜೆ.ಪಿ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದೆ. ಚಿತ್ರದ ನಿರ್ಮಾಪಕರಾದ ಮುರಳಿ ರಾಮಸ್ವಾಮಿ, ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿದ್ದಾರೆ.

‘ಮೆರ್ಸಲ್’ ವಿವಾದದ ನಡುವೆಯೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...