alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದ ಜೊತೆ ಹಾಸಿಗೆ ಹಂಚಿಕೊಳ್ತಾಳೆ ಈ ನಟಿ…!

ಮನೆಯಲ್ಲಿ ನಾಯಿ, ಬೆಕ್ಕು, ಕುರಿ, ಕೋಳಿ ಸಾಕೋದನ್ನು ಕೇಳಿದ್ದೇವೆ. ಕಾಡಿನ ರಾಜ ಸಿಂಹವನ್ನು ಸಾಕ್ತಾರೆ ಎಂಬ ವಿಷ್ಯ ನಿಮಗೆ ಗೊತ್ತಾ? ಹಾಲಿವುಡ್ ನ ನಟಿಯೊಬ್ಬಳು ಸಿಂಹವನ್ನು ಸಾಕಿದ್ದಲ್ಲದೆ ಅದ್ರ ಜೊತೆ ಮಲಗ್ತಾಳೆ.

ಹಾಲಿವುಡ್ ನಟಿ ಮೆಲಾನಿ ಗ್ರಿಫಿತ್ ಇಂಥ ಸಾಹಸ ಮಾಡ್ತಿದ್ದಾಳೆ. ಸಿಂಹ ಹಾಗೂ ಮೆಲಾನಿ ಸ್ನೇಹ ಗಾಢವಾಗಿದೆ. ಇದನ್ನು ಕೇಳಿದ ಪ್ರತಿಯೊಬ್ಬರೂ ಆಶ್ಚರ್ಯಕ್ಕೊಳಗಾಗ್ತಾರೆ. ಮನೆಯಲ್ಲಿ ಸಾಕಿದ ನಾಯಿಯಂತೆ ಸಿಂಹದ ಜೊತೆ ಆಟವಾಡ್ತಾಳೆ ಮೆಲಾನಿ.

ಕೆಲ ವರ್ಷಗಳ ಹಿಂದೆ ಮೆಲಾನಿಗೆ ಕುಟುಂಬಸ್ಥರು ಸಿಂಹವನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ನೋಡಿ ಮೆಲಾನಿ ತುಂಬಾ ಖುಷಿಯಾಗಿದ್ದಳಂತೆ. ತನ್ನ ಮಗುವಿನಂತೆ ಸಿಂಹವನ್ನು ಪ್ರೀತಿ ಮಾಡುವ ಮೆಲಾನಿ ಅದಕ್ಕೆ ನೀಲ್ ಎಂದು ಹೆಸರಿಟ್ಟಿದ್ದಾಳೆ.

ನೀಲ್ ಕೂಡ ಮೆಲಾನಿಯನ್ನು ತುಂಬಾ ಪ್ರೀತಿ ಮಾಡುತ್ತದೆ. ಎಂದೂ ಮೆಲಾನಿಗೆ ಹಾನಿ ಮಾಡಿಲ್ಲ. ನೀಲ್ ಹಾಗೂ ಮೆಲಾನಿ ಒಂದೇ ಮನೆಯಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ಆಟವಾಡ್ತಾರೆ. ಒಂದೇ ಸ್ವಿಮ್ಮಿಂಗ್ ಫೂಲ್ ನಲ್ಲಿ ಆಟವಾಡ್ತಾರೆ. ರಾತ್ರಿ ಇಬ್ಬರು ಒಟ್ಟಿಗೆ ಮಲಗ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...