alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ರಾಕೆಟ್ ಪ್ರಕರಣ: ತಮಿಳು ನಟಿಗೆ ಅಸಭ್ಯ ಪ್ರಶ್ನೆ ಕೇಳಿದ ಅಧಿಕಾರಿಗಳು

ಚಿಕಾಗೊದಲ್ಲಿ ಭಾರತೀಯ ಮೂಲದ ದಂಪತಿ ನಡೆಸುತ್ತಿದ್ದ ಸೆಕ್ಸ್ ರಾಕೆಟ್ ಬಣ್ಣ ಈಗಾಗ್ಲೇ ಬಯಲಾಗಿದೆ. ತೆಲುಗು ಚಿತ್ರ ನಿರ್ಮಾಪಕ ಕಿಶೋರ್ ಹಾಗೂ ಆತನ ಪತ್ನಿಯನ್ನು ಅಮೆರಿಕಾ ತನಿಖಾ ತಂಡ ಬಂಧಿಸಿದೆ. ಈ ರಾಕೆಟ್ ನಲ್ಲಿ ತೆಲುಗು, ತಮಿಳು ಸೇರಿದಂತೆ ಕನ್ನಡದ ನಟಿಯರು ಭಾಗಿಯಾಗಿದ್ದಾರೆಂಬ ಆರೋಪವಿದೆ.

ಚಲನಚಿತ್ರೋತ್ಸವದ ಹೆಸರಿನಲ್ಲಿ ನಟಿಯರನ್ನು ಚಿಕಾಗೊಗೆ ಕರೆದೊಯ್ಯುತ್ತಿದ್ದ ದಂಪತಿ ಅಲ್ಲಿ ದೊಡ್ಡ ಗ್ರಾಹಕರನ್ನು ಹಿಡಿದು ನಟಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ಮುಂದುವರೆದಿದೆ. ಈ ಮಧ್ಯೆ ಅಮೆರಿಕಾ ತನಿಖಾ ತಂಡ ಎಲ್ಲ ನಟಿಯರನ್ನು ಅನುಮಾನದಿಂದ ನೋಡ್ತಿದೆ.

ನಟಿ ಮೆಹ್ರೀನ್ ಪಿರ್ಝಾದಾ ಕೂಡ ಮುಜುಗರದ ಪರಿಸ್ಥಿತಿ ಎದುರಿಸಿದ್ದಾರೆ. ತಮಿಳು ಚಿತ್ರವೊಂದರ ಶೂಟಿಂಗ್ ಮುಗಿಸಿ ಕುಟುಂಬಸ್ಥರ ಭೇಟಿಗಾಗಿ ಮೆಹ್ರೀನ್ ಅಮೆರಿಕಾಕ್ಕೆ ತೆರಳಿದ್ದಳು. ಮೆಹ್ರೀನ್ ತಮಿಳು ನಟಿ ಎಂಬ ಸಂಗತಿ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿಯೇ ಮೆಹ್ರೀನ್ ತಡೆದ ಅಧಿಕಾರಿಗಳು ಸುಮಾರು ಅರ್ಧ ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ.

ಸೆಕ್ಸ್ ರಾಕೆಟ್ ಬಗ್ಗೆ ನನಗೆ ಮಾಹಿತಿಯಿರಲಿಲ್ಲ. ನಾನು ಕುಟುಂಬಸ್ಥರ ಭೇಟಿಗೆ ಆಗಾಗ ಅಮೆರಿಕಾಕ್ಕೆ ಹೋಗ್ತಿರುತ್ತೇನೆ. ಆದ್ರೆ ಈ ಬಾರಿ ಕೆಟ್ಟ ಅನುಭವವಾಯ್ತು. ಅಧಿಕಾರಿಗಳು ಅಸಹಜ ಪ್ರಶ್ನೆಗಳನ್ನು ಕೇಳಿ ಮುಜುಗರವುಂಟು ಮಾಡಿದ್ದಾರೆಂದು ಮೆಹ್ರೀನ್ ಹೇಳಿದ್ದಾಳೆ.

ಸೆಕ್ಸ್ ರಾಕೆಟ್ ಬಗ್ಗೆ ಇರುವ ಎಲ್ಲ ಅನುಮಾನ ಬಗೆಹರಿಯುವವರೆಗೂ ಅಮೆರಿಕಾ ಅಧಿಕಾರಿಗಳು ತಮಿಳು ಕಲಾವಿದರನ್ನು ಪ್ರಶ್ನೆ ಮಾಡಲಿದ್ದಾರೆ. ಕೊನೆಯಲ್ಲಿ ಕ್ಷಮೆ ಕೇಳಿ ನನ್ನನ್ನು ನಿಲ್ದಾಣದಿಂದ ಹೊರಗೆ ಕಳುಹಿಸಿದ್ದಾರೆಂದು ನಟಿ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...