alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಕ್ಸ್ ಪ್ರತಿಮೆ ಎದುರು ಪೋಸ್ ಕೊಟ್ಟ ಕಾಜೋಲ್

ಖ್ಯಾತ ಬಾಲಿವುಡ್ ನಟಿ ಕಾಜೋಲ್, ಅಜಯ್ ದೇವಗನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಳಿಕ ಕೆಲಕಾಲ ಚಿತ್ರರಂಗದಿಂದ ದೂರವಾಗಿದ್ದರು. ಆ ನಂತರ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ರ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಬದುಕಿಗೆ ಮತ್ತೆ ಮರಳಿ ಬಂದಿದ್ದರು.

ಸದ್ಯ, ಪತಿ ಅಜಯ್ ದೇವಗನ್ ರ ನಿರ್ಮಾಣ ಸಂಸ್ಥೆಯ ಚಿತ್ರವೊಂದರಲ್ಲಿ ಕಾಜೋಲ್ ಅಭಿನಯಿಸುತ್ತಿದ್ದು, ಇತ್ತೀಚೆಗೆ ಪುತ್ರಿ ನ್ಯಾಸಾ ಜೊತೆ ಕಾಜೋಲ್ ಸಿಂಗಪೂರ್ ಗೆ ತೆರಳಿದ್ದರು.

ಅಲ್ಲಿನ ಮೇಡಂ ಟುಸಾಡ್ಸ್ ಮ್ಯೂಸಿಯಂಗೆ ಕಾಜೋಲ್ ಭೇಟಿ ನೀಡಿದ್ದು, ತಮ್ಮ ಮೇಣದ ಪ್ರತಿಮೆ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಅವರ ಪತಿ ಅಜಯ್ ದೇವಗನ್, ‘ಮೀಟ್ ದ ಸೈಲೆಂಟ್ ಕಾಜೋಲ್’ ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ. ಕಾಜೋಲ್ ಜೊತೆ ಪುತ್ರಿ ನ್ಯಾಸಾ ಹಾಗೂ ಅತ್ತೆ ವೀಣಾ ದೇವಗನ್ ಕೂಡಾ ಇದ್ದು, ನ್ಯಾಸಾ ಕಾಜೋಲ್ ಜೊತೆ ಮೇಣದ ಪ್ರತಿಮೆ ಮುಂದೆ ಪೋಸ್ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...