alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಖ್-ಸಲ್ಮಾನ್ ಚಿತ್ರದಿಂದಾಗಿ ಈತ ಕಳೆದುಕೊಂಡ ಹಣವೆಷ್ಟು..?

loss

ಶಾರುಖ್ ಖಾನ್ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ಪ್ರೇಕ್ಷಕರು ಶಾರುಖ್-ಅನುಷ್ಕಾ ಜೋಡಿಯ ಈ ಸಿನೆಮಾವನ್ನು ಇಷ್ಟಪಟ್ಟಿಲ್ಲ. 6 ವಾರಗಳ ಹಿಂದ ನಟ ಸಲ್ಮಾನ್ ಖಾನ್ ಗೆ ಕೂಡ ಇಂಥದ್ದೇ ಅನುಭವವಾಗಿತ್ತು.

ಬಹುನಿರೀಕ್ಷಿತ ಚಿತ್ರ ಟ್ಯೂಬ್ ಲೈಟ್ ಕೂಡ ಫ್ಲಾಪ್ ಆಗಿತ್ತು. ಈ ಖಾನ್ ದ್ವಯರ ಸಿನೆಮಾ ತೋಪೆದ್ದಿರೋದ್ರಿಂದ ಎನ್ ಎಚ್ ಸ್ಟುಡಿಯೋಸ್ ವಿತರಕ ನರೇಂದ್ರ ಹಿರಾವತ್ ಸಂಕಷ್ಟಕ್ಕೀಡಾಗಿದ್ದಾರೆ. ಎರಡೂ ಚಿತ್ರಗಳ ಸೋಲಿನಿಂದಾಗಿ ನರೇಂದ್ರಗೆ 60 ಕೋಟಿ ರೂಪಾಯಿ ನಷ್ಟವಾಗಿದೆ.

narendra-hirawat-mid-day_640x640_81502436590

ನರೇಂದ್ರ ಭಾರತದಲ್ಲಿ ಟ್ಯೂಬ್ ಲೈಟ್ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದರು. ನಷ್ಟವನ್ನು ತುಂಬಿಕೊಡುವುದಾಗಿ ನಟ ಸಲ್ಮಾನ್ ಖಾನ್ ನರೇಂದ್ರಗೆ ಭರವಸೆ ನೀಡಿದ್ದರು. ಆದ್ರೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ ಅಂತಾ ನರೇಂದ್ರ ಸ್ಪಷ್ಟಪಡಿಸಿದ್ದಾರೆ.

ಆದ್ರೆ ಸಲ್ಲು ಕೊಟ್ಟ ಮಾತು ತಪ್ಪೊಲ್ಲ ಅನ್ನೋ ವಿಶ್ವಾಸವೂ ಅವರಿಗಿದೆ. ಈ ಹಿಂದೆ ಕೂಡ ಶಾರುಖ್ ಜೊತೆಗೆ ಕೆಲಸ ಮಾಡಿರುವ ನರೇಂದ್ರ, ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದಿಂದಾದ ನಷ್ಟಕ್ಕೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...