alex Certify
ಕನ್ನಡ ದುನಿಯಾ       Mobile App
       

Kannada Duniya

ಜೂಹಿ ಚಾವ್ಲಾ ಪುತ್ರಿ ಏನ್ಮಾಡ್ತಿದ್ದಾರೆ ಗೊತ್ತಾ…?

ಬಾಲಿವುಡ್ ನಟಿ ಜೂಹಿ ಚಾವ್ಲಾ, ಕನ್ನಡ ಚಿತ್ರರಂಗದ ಮೂಲಕವೇ ಖ್ಯಾತಿ ಪಡೆದಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ರ ‘ಪ್ರೇಮಲೋಕ’ ಚಿತ್ರದಲ್ಲಿ ಜೂಹಿ ಚಾವ್ಲಾ ಅಭಿನಯಿಸಿದ್ದು, ಇದಾದ ಬಳಿಕವೂ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬಳಿಕ ಬಾಲಿವುಡ್ ಗೆ ಹಾರಿದ ಜೂಹಿ ಚಾವ್ಲಾ ಈಗಲೂ ಅಭಿನಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನಿಲ್ ಕಪೂರ್, ಅವರ ಪುತ್ರಿ ಸೋನಂ ಕಪೂರ್ ಜೊತೆಗೆ ‘ಏಕ್ ಲಡ್ಕಿ ಕೋ ಐಸಾ ಲಗಾ’ ಚಿತ್ರದಲ್ಲಿ ಜೂಹಿ ಕಾಣಿಸಿಕೊಳ್ಳಲಿದ್ದು, ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರಾಗಿದ್ದಾರೆ.

ಉದ್ಯಮಿ ಜಯ್ ಮೆಹ್ತಾ ಜೊತೆ ವಿವಾಹವಾಗಿರುವ ಜೂಹಿ ಚಾವ್ಲಾರಿಗೆ ಜಾಹ್ನವಿ ಮೆಹ್ತಾ ಎಂಬ ಮಗಳಿದ್ದಾರೆ. ಬಹುತೇಕ ಬಾಲಿವುಡ್ ನಟ-ನಟಿಯರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿರುವ ಮಧ್ಯೆ ಜಾಹ್ನವಿ ಮೆಹ್ತಾ ಮಾತ್ರ ತಂದೆಯಂತೆ ಉದ್ಯಮದಲ್ಲಿ ತೊಡಗಿಕೊಳ್ಳುವ ಇಚ್ಚೆ ಹೊಂದಿದ್ದಾರಂತೆ. ಇಂಗ್ಲೆಂಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಜಾಹ್ನವಿ ಮೆಹ್ತಾ, ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ, ಜಾಹ್ನವಿ ಮೆಹ್ತಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...