alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಕಾಲಿನಲ್ಲಿ ನೃತ್ಯ ಮಾಡುವ ಛಲಗಾತಿ…!

ತಾವಿಷ್ಟ ಪಡುವ ಕೆಲಸವನ್ನು ಎಷ್ಟೇ ಕಷ್ಟವಾದರೂ ಮಾಡುವ ಛಲ ಕೆಲವೊಬ್ಬರಲ್ಲಿ ಮಾತ್ರ ಇರುತ್ತದೆ. ಈ ಹುಡುಗಿಯೂ ಅಂಥವಳೆ. ಕಾಲಿಲ್ಲದೇ ಹೋದರೂ ನಾಟ್ಯ ಮಾಡುವ ಛಲಗಾತಿ ಈಕೆ.

16 ವರ್ಷದ ಅಂಜಲಿ ರಾಯ್ ತನ್ನ 11 ನೇ ವಯಸ್ಸಿನಲ್ಲಿ ಕ್ಯಾನ್ಸರ್ ಅನ್ನೋ ಮಾರಕ ಖಾಯಿಲೆಗೆ ತುತ್ತಾದ ಕಾರಣಕ್ಕೆ ಎಡಗಾಲನ್ನು ಕಳೆದುಕೊಳ್ಳಬೇಕಾಯ್ತು. ನಾಟ್ಯವೆಂದರೆ ಈಕೆಗೆ ಪಂಚಪ್ರಾಣ. ಅಂಥದ್ದರಲ್ಲಿ ಒಂದು ಕಾಲು ಕಳೆದುಕೊಂಡಿದ್ದು ಆಕೆಯ ಕನಸಿಗೆ ಬೆಂಕಿ ಇಟ್ಟಂಗಾಗಿತ್ತು.

ಆದರೆ ಆಕೆ ಛಲ ಬಿಡಲಿಲ್ಲ. ಒಂದೇ ಕಾಲಿನಿಂದಲೇ ನೃತ್ಯಾಭ್ಯಾಸ ಆರಂಭಿಸಿ ಅನೇಕ ಪ್ರದರ್ಶನಗಳನ್ನೂ ನೀಡಿದ್ದಾಳೆ. ಆಪರೇಷನ್ ಸಮಯದಲ್ಲಿ ವೈದ್ಯರು ತೋರಿಸಿದ ಮಯೂರಿ ನೃತ್ಯ ತನಗೆ ಸ್ಪೂರ್ತಿ ನೀಡಿರೋದಾಗಿ ಹೇಳುತ್ತಾಳೆ ಅಂಜಲಿ. ಆಕೆಗೆ ಓದು ಹಾಗೂ ನೃತ್ಯ ಕಲಿಕೆಗೆ ಸಹಾಯ ಹಸ್ತ ಚಾಚಲು ಅನೇಕರು ಮುಂದೆ ಬಂದಿರೋದು ಸಂತಸದ ವಿಷಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...