alex Certify
ಕನ್ನಡ ದುನಿಯಾ       Mobile App
       

Kannada Duniya

‘ಗಂಡ-ಹೆಂಡತಿ’ ಚಿತ್ರದ ಸಂದರ್ಭದಲ್ಲಿ ನಡೆದ ಲೈಂಗಿಕ ದೌರ್ಜನ್ಯವನ್ನು ಬಿಚ್ಚಿಟ್ಟ ನಟಿ ಸಂಜನಾ

ಹಾಲಿವುಡ್ ಚಿತ್ರರಂಗದಿಂದ ಆರಂಭವಾದ ‘ಮೀ ಟೂ’ ಅಭಿಯಾನ ಈಗ ಬಾಲಿವುಡ್ ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಮಧ್ಯೆ ಸ್ಯಾಂಡಲ್ ವುಡ್ ಚಿತ್ರರಂಗದಲ್ಲೂ ಬಿರುಗಾಳಿ ಎಬ್ಬಿಸಲಾರಂಭಿಸಿದೆ.

ಮೂರು ದಿನಗಳ ಹಿಂದಷ್ಟೇ ನಟಿ ಸಂಗೀತಾ ಭಟ್, ತಾವನುಭವಿಸಿದ ಲೈಂಗಿಕ ದೌರ್ಜನ್ಯವನ್ನು ತೆರೆದಿಟ್ಟು ಚಿತ್ರರಂಗಕ್ಕೇ ಗುಡ್ ಬೈ ಹೇಳಿದ್ದರೆ, ಇದೀಗ ಮತ್ತೊಬ್ಬ ನಟಿ ಸಂಜನಾ, ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

‘ಗಂಡ-ಹೆಂಡತಿ’ ಚಿತ್ರದ ಸಂದರ್ಭದಲ್ಲಿ ನಿರ್ದೇಶಕ ರವಿ ಶ್ರೀವತ್ಸ, ಬಲವಂತದಿಂದ ಐವತ್ತಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಭಯ ಹುಟ್ಟಿಸುವ ವಾತಾವರಣವಿತ್ತು ಎಂದು ಆರೋಪಿಸಿದ್ದಾರೆ.

ಶಿವ ಕೇಶವ ಚಿತ್ರದ ಸಂದರ್ಭದಲ್ಲೂ ಸಮಸ್ಯೆ ಎದುರಾಗಿತ್ತು ಎಂದಿರುವ ಸಂಜನಾ, ತಂದೆ ನನ್ನ ಜೊತೆ ಇರಲು ಅಡ್ಡಿ ಮಾಡುತ್ತಿದ್ದರು. ಅಲ್ಲದೆ ಫೈನಾನ್ಶಿಯರ್ ಜೊತೆ ಪಾರ್ಟಿಗೆ ಬರುವುದಿಲ್ಲವಾ ಎಂದು ಕೇಳಿ ಹಿಂಸೆ ಮಾಡಿದ್ದರು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...