alex Certify
ಕನ್ನಡ ದುನಿಯಾ       Mobile App
       

Kannada Duniya

ನಾನಾ ಪಾಟೇಕರ್, ಸಾಜಿದ್ ಖಾನ್ ಜೊತೆ ಕೆಲಸ ಮಾಡಲ್ಲ ಅಕ್ಷಯ್ ಕುಮಾರ್

ನಿರ್ದೇಶಕ ಸಾಜಿದ್ ಖಾನ್ ಹಾಗೂ ನಟ ನಾನಾ ಪಾಟೇಕರ್ ಮೇಲೆ ಬಂದಿರುವ ಲೈಂಗಿಕ ಶೋಷಣೆ ಆರೋಪ ಹೌಸ್ ಫುಲ್-4 ಚಿತ್ರದ ಮೇಲೆ ಪ್ರಭಾವ ಬೀರಿದೆ. ಚಿತ್ರದ ನಿರ್ದೇಶಕ ಹಾಗೂ ನಟನ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಮೇಲೆ ನಟ ಅಕ್ಷಯ್ ಕುಮಾರ್ ಶೂಟಿಂಗ್ ರದ್ದು ಮಾಡಿದ್ದಾರೆ.

ಅಕ್ಷಯ್ ಕುಮಾರ್ 28 ವರ್ಷಗಳ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಅಕ್ಷಯ್ ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ನಾನು ನಿನ್ನೆ ರಾತ್ರಿಯೇ ಶೂಟಿಂಗ್ ಬಿಟ್ಟು ದೇಶಕ್ಕೆ ವಾಪಸ್ ಆಗಿದ್ದೇನೆ. ಲೈಂಗಿಕ ಶೋಷಣೆ ಪ್ರಕರಣದ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೆ ಶೂಟಿಂಗ್ ರದ್ದು ಮಾಡುವಂತೆ ನಿರ್ಮಾಪಕರಿಗೆ ಮನವಿ ಮಾಡಿದ್ದೇನೆ ಎಂದು ಅಕ್ಷಯ್ ಟ್ವಿಟ್ ಮಾಡಿದ್ದಾರೆ.

ಇದೊಂದು ಗಂಭೀರ ಆರೋಪವಾಗಿದೆ. ಇದ್ರ ಬಗ್ಗೆ ತನಿಖೆ ನಡೆಯಬೇಕು. ದೋಷಿ ಎಂಬುದು ಸಾಬೀತಾದ್ರೆ ಅವ್ರ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ಪೀಡಿತರಿಗೆ ನ್ಯಾಯ ಸಿಗಬೇಕೆಂದು ಅಕ್ಷಯ್ ಕುಮಾರ್ ಟ್ವಿಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಶಿಸ್ತಿನ ನಟ. ಈವರೆಗೆ ಎಂದೂ ಅವ್ರು ಶೂಟಿಂಗ್ ಕ್ಯಾನ್ಸಲ್ ಮಾಡಿಲ್ಲವಂತೆ. ಆದ್ರೆ ಲೈಂಗಿಕ ಶೋಷಣೆ ವಿರೋಧಿಯಾಗಿರುವ ಅಕ್ಷಯ್, ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...