alex Certify
ಕನ್ನಡ ದುನಿಯಾ       Mobile App
       

Kannada Duniya

47 ವರ್ಷಗಳ ಬಳಿಕ ಮತ್ತೊಮ್ಮೆ ಬೈಕ್ ಏರಿದ ಖ್ಯಾತ ನಟಿ

1970 ಮತ್ತು 80 ರ ದಶಕದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ್ದ ಡ್ರೀಮ್ ಗರ್ಲ್ ಹಾಗೂ ಈಗಿನ ಸಂಸದೆ ಹೇಮಾ ಮಾಲಿನಿ ಅನೇಕ ವರ್ಷಗಳ ನಂತ್ರ ಮತ್ತೆ ಬೈಕ್ ಏರಿದ್ದಾರೆ. 1971 ರಲ್ಲಿ ಮೊದಲ ಬಾರಿ ಹೇಮಾ ಮಾಲಿನಿ ಬೈಕ್ ಏರಿದ್ದರು. ಇದಾಗಿ 47 ವರ್ಷಗಳ ನಂತ್ರ ಮತ್ತೆ ಬೈಕ್ ಮೇಲೆ ಕುಳಿತಿದ್ದಾರೆ. ಈ ಬಾರಿ ಚಿತ್ರದ ಶೂಟಿಂಗ್ ಗೆ ಹೇಮಾ ಬೈಕ್ ಏರಿಲ್ಲ.

ಹೇಮಾ ಮಾಲಿನಿ ಪಕ್ಷದ ರ್ಯಾಲಿಯೊಂದರ ಹಿನ್ನೆಲೆಯಲ್ಲಿ ಬುಲೆಟ್ ಬೈಕ್ ಹತ್ತಿದ್ದಾರೆ. ಬೈಕ್ ಹಿಂದೆ ಹೆಲ್ಮೆಟ್ ಧರಿಸಿ ಕುಳಿತಿದ್ದ ಹೇಮಾ ಮಾಲಿನಿ ವಿಡಿಯೋ ವೈರಲ್ ಆಗಿದೆ. 1971 ರಲ್ಲಿ ‘ಅಂದಾಜ್’ ಚಿತ್ರದ ‘ಜಿಂದಗಿ ಏಕ್ ಸಫರ್’ ಹಾಡಿಗಾಗಿ ಮೊದಲ ಬಾರಿ ರಾಜೇಶ್ ಖನ್ನಾ ಜೊತೆ ಬೈಕ್ ಏರಿದ್ದರು. ಇದಾದ ನಂತ್ರ ಮತ್ತೆ ಅನೇಕ ಚಿತ್ರಗಳಲ್ಲಿ ಬೈಕ್ ಹಿಂದೆ ಕುಳಿತಿದ್ರೆ ಮತ್ತೆ ಕೆಲ ಚಿತ್ರಗಳಲ್ಲಿ ಬೈಕ್ ಚಲಾಯಿಸಿದ್ದರು ಹೇಮಾ.

ಸಂಸದೆಯಾದ್ಮೇಲೆ ಹೇಮಾ ಮಾಲಿನಿಗೆ ಬೈಕ್ ಏರುವ ಮತ್ತೊಂದು ಅವಕಾಶ ಸಿಕ್ಕಿತ್ತು. ಕಮಲ್ ಸಂದೇಶ್ ಯಾತ್ರೆ ಹಿನ್ನೆಲೆಯಲ್ಲಿ ಹೇಮಾ ಮಾಲಿನಿ ಬೈಕ್ ಹತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...