alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಕ್ರಿಕೆಟಿಗನ ಪುತ್ರಿಯ ವೈವಾಹಿಕ ಜೀವನದಲ್ಲಿ ಬಿರುಕು

ಶನಿವಾರ ಸಂಜೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿನ್ಯಾಸಕಿ ಮಸಾಬಾ ಗುಪ್ತಾ ಬರೆದ ಕೆಲವು ಸಾಲುಗಳು, ವೈವಾಹಿಕ ಜೀವನದ ಬಿರುಕನ್ನು ತೆರೆದಿಟ್ಟಿತ್ತು. ಅಲ್ಲದೆ ಮಸಾಬಾ-ಮಧು ದಂಪತಿ ವಿಚ್ಚೇದನಕ್ಕೆ ಮುಂದಾಗಿರೋದಾಗಿ ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಮಸಾಬಾ ಗುಪ್ತಾ ಮತ್ತು ಮಧು ಮಂಟೇನಾ ಸಪ್ತಪದಿ ತುಳಿದಿದ್ದರು.

ದಂಪತಿಗಳ ನಡುವಿನ ಬಿರುಕಿನ ಬಗ್ಗೆ ಮಸಾಬಾ, ಒಂದು ಪತ್ರವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಅದ್ರಂತೆ ದಂಪತಿ ಇಷ್ಟವಿಲ್ಲದೆ ಒಬ್ಬರ ಜೊತೆ ಇನ್ನೊಬ್ಬರು ಇರುವ ಬದಲು, ಇಬ್ಬರೂ ಬೇರೆಯಾಗಿ ಒಬ್ಬರಿಗೊಬ್ಬರು ಗೌರವಿಸುವುದು ಸೂಕ್ತ. ಅಲ್ಲದೆ ಇಬ್ಬರೂ ಬೇರೆ ಬೇರೆಯಾಗಲು ಮುಂದಾಗಿರೋದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ನಮ್ಮಿಬ್ಬರ ಕುಟುಂಬಕ್ಕೂ ಸಂಕಷ್ಟದ ಸಮಯ. ಸ್ನೇಹಿತರು ನಮ್ಮ ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕಿನ ಬಗ್ಗೆ ಪ್ರಶ್ನೆ ಎತ್ತಿದ್ರೆ, ನಾವು ಉತ್ತರ ನೀಡೆವು ಎಂದು ಬರೆದಿದ್ದಾರೆ.

ನೀನಾ ಗುಪ್ತಾ ಹಾಗೂ ವಿವಿಯನ್ ರಿಚರ್ಡ್ಸ್ ಮಗಳು ಮಸಾಬಾ. ವೆಸ್ಟ್ ಇಂಡೀಸ್ ಖ್ಯಾತ ಆಟಗಾರ ವಿವಿಯನ್ ಭಾರತದ ವಿರುದ್ಧದ ಪಂದ್ಯ ಆಡಲು ಬಂದಾಗ, ಮುಂಬೈನ ಪಾರ್ಟಿಯೊಂದಲ್ಲಿ ನೀನಾರನ್ನು ನೋಡಿ ಮನ ಸೋತಿದ್ದರು. ಆಗಿನಿಂದಲೂ ಇಬ್ಬರು ಮಧ್ಯ ಪ್ರೇಮ ಉಂಟಾಗಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...