alex Certify
ಕನ್ನಡ ದುನಿಯಾ       Mobile App
       

Kannada Duniya

ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವ ನಟ

nirup-dhanya-engagement

ಬಿಡುಗಡೆಯಾದಲ್ಲೆಲ್ಲಾ ಜಯಭೇರಿ ಬಾರಿಸಿದ್ದಲ್ಲದೇ, ವಿದೇಶದಲ್ಲಿಯೂ ಕಮಾಲ್ ಮಾಡಿದ್ದ, ಹೊಸ ಅಲೆಯನ್ನೇ ಸೃಷ್ಠಿಸಿದ್ದ ‘ರಂಗಿತರಂಗ’ ಚಿತ್ರದ ನಾಯಕ ನಿರೂಪ್ ಭಂಡಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ವಿವಾಹ ಸಮಾರಂಭ ನಡೆಯಿತು.

ನಿರೂಪ್ ಭಂಡಾರಿ ತಮ್ಮ ಬಹುಕಾಲದ ಗೆಳತಿ ಧನ್ಯಾ ಅವರನ್ನು ಮದುವೆಯಾಗಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಧನ್ಯಾ ಅಮೆರಿಕದಲ್ಲಿ ನೆಲೆಸಿದ್ದಾರೆ. ನಿರೂಪ್ ಭಂಡಾರಿ ಕೂಡ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಹಿಂದೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ನಿರೂಪ್ ಭಂಡಾರಿ ಹಾಗೂ ಧನ್ಯಾ ಅವರು ಪ್ರೀತಿಸುತ್ತಿದ್ದು, ಮನೆಯವರಿಗೆ ವಿಷಯ ತಿಳಿಸಿದ್ದರು. ಎರಡೂ ಮನೆಯವರ ಒಪ್ಪಿಗೆ ಪಡೆದುಕೊಂಡು ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೈಸೂರಿನಲ್ಲಿ ಮದುವೆ ನಡೆದಿದ್ದು, ಪುತ್ತೂರಿನಲ್ಲಿ ಆರತಕ್ಷತೆ ನಡೆಯಲಿದೆ. ಮದುವೆಗೆ ವಧು, ವರರ ಕುಟುಂಬದವರು ‘ರಂಗಿತರಂಗ’ ನಿರ್ದೇಶಕ ಹಾಗೂ ನಿರೂಪ್ ಸಹೋದರ ಅನೂಪ್ ಭಂಡಾರಿ, ನಟ ಸಾಯಿಕುಮಾರ್ ಸೇರಿದಂತೆ ಹಲವರು ಆಗಮಿಸಿ ಶುಭಕೋರಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...