alex Certify
ಕನ್ನಡ ದುನಿಯಾ       Mobile App
       

Kannada Duniya

CRPF ಯೋಧರಿಗೆ ನೆರವಾದ ಸೆಲೆಬ್ರಿಟಿಗಳಿಗೆ ಬೆದರಿಕೆ

akshay-saina

ಹುತಾತ್ಮ ಸಿಆರ್ಪಿಎಫ್ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾವೋವಾದಿಗಳು ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ ಬೆದರಿಕೆ ಹಾಕಿದ್ದಾರೆ.

”ಸಿಆರ್ಪಿಎಫ್ ಯೋಧರು ದೇಶಕ್ಕಾಗಿ ಹೋರಾಡುತ್ತಿಲ್ಲ, ಅವರೆಲ್ಲ ಕಾರ್ಪೊರೇಟ್ ಹೌಸ್ ಗಳ ಪ್ರವರ್ತಕರು. ಹಾಗಾಗಿ ಸೆಲೆಬ್ರಿಟಿಗಳು ಯೋಧರಿಗೆ ನೆರವು ನೀಡುವ ಬದಲು ತಮ್ಮನ್ನು ಬೆಂಬಲಿಸಿ” ಅಂತಾ ಮಾವೋವಾದಿಗಳು ಒತ್ತಾಯಿಸಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ಸೈನಾ ನೆಹ್ವಾಲ್ ಸೈನಿಕರಿಗೆ ನೆರವಾಗಿರೋದನ್ನು ಖಂಡಿಸಿ ಬಸ್ತಾರ್ ಜಿಲ್ಲೆಯಲ್ಲಿ ನಕ್ಸಲರು ಕರಪತ್ರಗಳನ್ನು ಅಂಟಿಸಿದ್ದಾರೆ. ಹಿಂದಿ ಹಾಗೂ ಬುಡಕಟ್ಟು ಜನಾಂಗದ ಗೊಂದಿ ಭಾಷೆಯಲ್ಲಿ ಕರಪತ್ರಗಳನ್ನು ಬರೆಯಲಾಗಿದೆ.

ಕಳೆದ ಮಾರ್ಚ್ 16ರಂದು ಛತ್ತೀಸ್ ಗಢದ ಬಸ್ತಾರ್ ಜಿಲ್ಲೆಯ ಸುಖ್ಮಾದಲ್ಲಿ ದಾಳಿ ನಡೆಸಿದ್ದ ಕೆಂಪು ಉಗ್ರರು, 12 ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿದ್ರು. ಹುತಾತ್ಮ ಯೋಧರ ಕುಟುಂಬಕ್ಕೆ ನಟ ಅಕ್ಷಯ್ ಕುಮಾರ್ ತಲಾ 10 ಲಕ್ಷ ರೂಪಾಯಿ ನೀಡಿದ್ದಾರೆ.

ಸೈನಾ ನೆಹ್ವಾಲ್ ಪ್ರತಿ ಕುಟುಂಬಕ್ಕೆ 50,000 ರೂಪಾಯಿ ನೀಡಿದ್ದರು. ಹುತಾತ್ಮ ಯೋಧರಿಗೆ ಸಾರ್ವಜನಿಕರು ಕೂಡ ನೇರವಾಗಿ ಆರ್ಥಿಕ ಸಹಾಯ ಮಾಡಲು ನೆರವಾಗುವ ನಿಟ್ಟಿನಲ್ಲಿ ವೆಬ್ ಸೈಟ್ ಒಂದನ್ನು ಆರಂಭಿಸಬೇಕೆಂದು ಅಕ್ಷಯ್ ಕುಮಾರ್ ಮನವಿ ಮಾಡಿದ್ದರು. ಅದನ್ನು ಒಪ್ಪಿದ ಕೇಂದ್ರ ಸರ್ಕಾರ bharatkeveer.gov.in ಎಂಬ ವೆಬ್ ಸೈಟ್ ಆರಂಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...