alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಪಡುಕೋಣೆ ಹಾಡಿಗೆ ವಿಶ್ವ ಸುಂದರಿಯ ಡಾನ್ಸ್

17 ವರ್ಷಗಳ ಬಳಿಕ ವಿಶ್ವ ಸುಂದರಿ ಕಿರೀಟವನ್ನು ಭಾರತಕ್ಕೆ ತಂದಿರುವ ಮಾನುಷಿ ಚಿಲ್ಲರ್ ತಾನು ಸೌಂದರ್ಯ ಹಾಗೂ  ಪ್ರತಿಭೆಯ ಪರ್ಫೆಕ್ಟ್ ಮಿಶ್ರಣ ಅನ್ನೋದನ್ನು ಸಾಬೀತು ಮಾಡಿದ್ದಾಳೆ.  ಮಾನುಷಿ ಅತ್ಯದ್ಭುತ ಡಾನ್ಸರ್ ಕೂಡ.

ವಿಶ್ವಸುಂದರಿ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ದೇಶದ ಹಾಡಿಗೆ ಡಾನ್ಸ್ ಮಾಡಬೇಕಿತ್ತು. ಮಾನುಷಿ ಕೂಡ ವಿಶ್ವ ಸುಂದರಿ ಸ್ಪರ್ಧೆಯ ವೇದಿಕೆ ಮೇಲೆ ನರ್ತಿಸಿದ್ದಾರೆ. ದೀಪಿಕಾ ಅಭಿನಯದ ‘ಗಲಿಯೋಂಕಿ ರಾಸ್ಲೀಲಾ ರಾಮ್ ಲೀಲಾ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾಳೆ.

ಮಾನುಷಿ ಕುಚ್ಚಿಪುಡಿ ನೃತ್ಯದಲ್ಲಿ ಪ್ರವೀಣೆ. ಗರ್ಭಾ ನೃತ್ಯವನ್ನು ಕೂಡ ಅದ್ಭುತವಾಗಿ ಮಾಡಿದ್ದಾಳೆ. ಢೋಲ್ ಬಾಜೆ ಹಾಡಿಗೆ ಸೊಂಟ ಬಳುಕಿಸಿದ್ದಾಳೆ. ಮಾನುಷಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಗೆದ್ದ 6ನೇ ಭಾರತೀಯಳು. ವೃತ್ತಿಯಲ್ಲಿ ಕಾರ್ಡಿಯಾಕ್ ಸರ್ಜನ್ ಆಗಬೇಕೆಂಬ ಬಯಕೆ ಹೊಂದಿರೋ ಮಾನುಷಿ, ಸದ್ಯ ಎಂಬಿಬಿಎಸ್ ಓದುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...