alex Certify
ಕನ್ನಡ ದುನಿಯಾ       Mobile App
       

Kannada Duniya

ಮನೋಜ್ ವಾಜಪೇಯಿಗೆ ಕಾಡ್ತಿದೆ ತೀವ್ರ ತಲೆನೋವು

manoj-bajpai-heath

ಇತ್ತೀಚೆಗೆ ತೀವ್ರ ತಲೆನೋವಿನ ಕಾರಣಕ್ಕೆ ಲಂಡನ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಮನೋಜ್ ವಾಜಪೇಯಿ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ನಾನು ಆರೋಗ್ಯವಾಗಿದ್ದು, ಕೆಲಸ ಮಾಡುತ್ತಿದ್ದೇನೆಂದು ಮನೋಜ್ ಹೇಳಿದ್ದಾರೆ.

ಬುಧವಾರ ಪದೇ ಪದೇ ತಲೆನೋವು ಕಾಣಿಸಿಕೊಂಡಿದ್ದರಿಂದ ಮನೋಜ್ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಸುದ್ದಿ ಬಂದಿತ್ತು. ಚಿತ್ರದ ಶೂಟಿಂಗ್ ಗಾಗಿ ಲಂಡನ್ ಗೆ ಬಂದಿದ್ದೆ. ನನಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ಆಸ್ಪತ್ರೆಗೆ ಹೋಗಿದ್ದೆ. ಎಲ್ಲ ರೀತಿಯ ಪರೀಕ್ಷೆ ನಡೆದಿದೆ. ಯಾವುದೇ ಗಂಭೀರ ರೋಗವಿಲ್ಲ. ಕೆಲಸಕ್ಕೆ ವಾಪಸ್ ಆಗಿದ್ದೇನೆ. ಧನ್ಯವಾದ ಎಂದು ಮಾಧ್ಯಮಗಳಿಗೆ ಲಿಖಿತ ಹೇಳಿಕೆ ನೀಡಿದ್ದಾರೆ ಮನೋಜ್ ವಾಜಪೇಯಿ.

ಐಯಾರಿಯಾ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಾಸಿರುದ್ಧೀನ್ ಶಾ ಜೊತೆ ಮನೋಜ್ ವಾಜಪೇಯಿ ನಟಿಸುತ್ತಿದ್ದಾರೆ. ಜನವರಿ 26,2018 ರಂದು ಚಿತ್ರತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...