alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯವರ ಒಪ್ಪಿಗೆ ಪಡೆದು ಗೇ ಆದ್ರ ಮನೋಜ್ ಬಾಜ್ಪೇಯಿ

gay

ಈವರೆಗೆ ಬಾಲಿವುಡ್ ನಲ್ಲಿ ಏನಾಗಿರಲಿಲ್ಲವೋ ಅದು ಈಗ ಆಗ್ತಾ ಇದೆ. ‘ಅಲಿಗಢ’ ಚಿತ್ರದಲ್ಲಿ ಮನೋಜ್ ಬಾಜ್ಪೇಯಿ ಹೊಸ ರೂಪದಲ್ಲಿ ಕಾಣಸಿಗಲಿದ್ದಾರೆ. ಈ ಚಿತ್ರದಲ್ಲಿ ಮನೋಜ್ ಬಾಜ್ಪೇಯಿ ಸಲಿಂಗಕಾಮಿ ಪ್ರೊಫೆಸರ್ ಶ್ರೀನಿವಾಸ್ ರಾಮಚಂದ್ರ ಸಿರಸ್ ಪಾತ್ರದಲ್ಲಿ ನಟಿಸಲಿದ್ದಾರೆ.

ಮನೋಜ್ ಬಾಜ್ಪೇಯಿ ಈ ಪಾತ್ರಕ್ಕೆ ಬಣ್ಣ ಹಚ್ಚಲು ಅವರ ಮನೆಯವರು ಒಪ್ಪಿಕೊಂಡಿದ್ದರಂತೆ. ಮನೆಯವರ ಅನುಮತಿ ಸಿಕ್ಕ ನಂತರ  ಗೇ ಪಾತ್ರ ನಿಭಾಯಿಸಲು ಬಾಜ್ಪೇಯಿ ನಿರ್ಧರಿಸಿದ್ರಂತೆ. ಮನೆಯವರು ನನ್ನನ್ನು ತುಂಬಾ ಪ್ರೀತಿಸ್ತಾರೆ. ಹಾಗಾಗಿ ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುವುದಿಲ್ಲ ಎನ್ನುತ್ತಾರೆ ಬಾಜ್ಪೇಯಿ.

ಕುಟುಂಬದ ಬಗ್ಗೆ ಮಾತನಾಡಿದ ಮನೋಜ್ ಬಾಜ್ಪೇಯಿ, ನಾನು ನಟನಾಗಿರುವ ಬಗ್ಗೆ ನಮ್ಮ ಮನೆಯವರಿಗೆ ಆಕ್ಷೇಪವಿಲ್ಲ. ಹಾಗಾಗಿ ನಾನು ಈ ಪಾತ್ರ ಮಾಡ್ತಿದ್ದೇನೆ ಎನ್ನುವಾಗ ಅವರು ಸಮಸ್ಯೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಮನೆಯವರು ನನ್ನನ್ನು ಪ್ರೀತಿ ಮಾಡ್ತಾರೆ. ನನ್ನ ಬಗ್ಗೆ ಆಲೋಚನೆ ಮಾಡುವುದಿಲ್ಲ. ನಾನು ಹಾಗೂ ನನ್ನ ಕುಟುಂಬದ ನಡುವೆ ಸುಂದರ ಸಂಬಂಧ ಇದೆ. ನಾನು ನನ್ನ ಹೆಂಡತಿ ಜೊತೆಯಲ್ಲೂ ಈ ಪಾತ್ರದ ಬಗ್ಗೆ ಮಾತನಾಡಿದ್ದೆ. ಆಕೆ ಕೂಡ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...