alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಗನಾ ಅಭಿನಯದ ಚಿತ್ರಕ್ಕೂ ಎದುರಾಗಿದೆ ಸಂಕಷ್ಟ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ವಿರುದ್ಧ ನಡೆದ ಪ್ರತಿಭಟನೆಯನ್ನು ಜನರು ಇನ್ನೂ ಮರೆತಿಲ್ಲ. ಅಷ್ಟರಲ್ಲಾಗ್ಲೇ ಮತ್ತೊಂದು ಸಿನೆಮಾ ವಿವಾದದ ಸುಳಿಯಲ್ಲಿ ಸಿಲುಕಿದೆ. ಕಂಗನಾ ರನಾವತ್ ಅಭಿನಯದ ‘ಮಣಿಕರ್ಣಿಕಾ’ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕುರಿತಾದ ಚಿತ್ರ ಇದು. ರಾಜಸ್ತಾನದಲ್ಲಿ ಸರ್ವ ಬ್ರಾಹ್ಮಣ ಮಹಾಸಭಾ ‘ಮಣಿಕರ್ಣಿಕಾ’ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಮಣಿಕರ್ಣಿಕಾ ಚಿತ್ರದಲ್ಲಿ ಬ್ರಿಟಿಷ್ ಪ್ರಜೆ ಮತ್ತು ಝಾನ್ಸಿ ರಾಣಿ ನಡುವಣ ಲವ್ ಅಫೇರ್ ಅನ್ನು ಚಿತ್ರಿಸಲಾಗಿದೆ ಅಂತಾ ಆರೋಪ ಮಾಡಿದೆ.

ವಿದೇಶೀಯನ ಪುಸ್ತಕ ಆಧರಿಸಿ ಮಾಡ್ತಿರೋ ಈ ಚಿತ್ರ ರಾಣಿಯ ಗೌರವಕ್ಕೆ ಧಕ್ಕೆ ತರುವಂತಿದೆ ಅಂತಾ ಹೇಳಿದೆ. ಚಿತ್ರದ ವಿವರ ಕೋರಿ ನಿರ್ಮಾಪಕ ಕಮಲ್ ಜೈನ್ ಗೆ ಮಹಾಸಭಾ ಅಧ್ಯಕ್ಷ ಸುರೇಶ್ ಮಿಶ್ರಾ ಪತ್ರ ಕೂಡ ಬರೆದಿದ್ದಾರಂತೆ. ಆದ್ರೆ ಚಿತ್ರದಲ್ಲಿ ರಾಣಿ ಲಕ್ಷ್ಮಿಬಾಯಿಗೆ ಅವಮಾನಿಸಿಲ್ಲ, ಅವರ ಧೈರ್ಯ, ಶೌರ್ಯವನ್ನು ಬಿಂಬಿಸಲಾಗಿದೆ ಅಂತಾ ನಿರ್ಮಾಪಕರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...