alex Certify
ಕನ್ನಡ ದುನಿಯಾ       Mobile App
       

Kannada Duniya

ಮಣಿರತ್ನಂ –ಸುಹಾಸಿನಿ ಪುತ್ರನಿಗೆ ಇಟಲಿಯಲ್ಲಿ ಹೀಗಾಯ್ತು

ಖ್ಯಾತ ನಿರ್ದೇಶಕ ಮಣಿರತ್ನಂ ಮತ್ತು ನಟಿ ಸುಹಾಸಿನಿ ಅವರ ಪುತ್ರ ನಂದನ್ ಇಟಲಿಗೆ ತೆರಳಿದ್ದ ಸಂದರ್ಭದಲ್ಲಿ ಕಹಿ ಅನುಭವವಾಗಿದೆ.

ಇಟಲಿ ವೆನಿಸ್ ವಿಮಾನ ನಿಲ್ದಾಣದಲ್ಲಿ ನಂದನ್ ಅವರ ಪರ್ಸ್ ಅನ್ನು ದೋಚಲಾಗಿದ್ದು, ಇದರಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.

ಪುತ್ರ ದೂರದ ದೇಶದಲ್ಲಿ ತೊಂದರೆಗೆ ಸಿಲುಕಿದ್ದನ್ನು ಸುಹಾಸಿನಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೇಳಿಕೊಂಡು ಅಲ್ಲಿರುವವರು ಆತನಿಗೆ ನೆರವಾಗುವಂತೆ ಮನವಿ ಮಾಡಿ ಫೋನ್ ನಂಬರ್ ಕೊಟ್ಟಿದ್ದಾರೆ.

ಆದರೆ, ಭಾರತದಿಂದಲೇ ನಂದನ್ ಗೆ ಹೆಚ್ಚಿನ ಕರೆಗಳು ಹೋಗಿ ಮೊಬೈಲ್ ಬ್ಯಾಟರಿ ಡೌನ್ ಆಗಿದೆ. ಬಳಿಕ ಸುಹಾಸಿನಿ ಭಾರತದಿಂದ ಯಾರೂ ಕರೆ ಮಾಡಬೇಡಿ. ಅಲ್ಲಿರುವ ಭಾರತೀಯರು ನಂದನ್ ನನ್ನು ಸಂಪರ್ಕಿಸಲು ಕಷ್ಟವಾಗಬಹುದು ಎಂದು ತಿಳಿಸಿದ್ದಾರೆ.

2 ಗಂಟೆಗಳ ಬಳಿಕ ನಂದನ್ ಗೆ ಇಟಲಿಯಲ್ಲಿನ ಭಾರತೀಯರು ನೆರವಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ. ತಮ್ಮ ಪುತ್ರನ ನೆರವಿಗೆ ಬಂದವರಿಗೆ ಸುಹಾಸಿನಿ ಕೃತಜ್ಞತೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...