alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಸಿನೆಮಾದಲ್ಲಿ ವಿಶಿಷ್ಟ ಪಾತ್ರ ಮಾಡ್ತಿದ್ದಾರೆ ಈ ನಟಿ

ಮಂದಿರಾ ಬೇಡಿ ಕಿರುತೆರೆಯಲ್ಲೂ ಸಖತ್ ಫೇಮಸ್ ಆಗಿದ್ದ ನಟಿ. ಮಂದಿರಾ ಅಭಿನಯದ ‘ಶಾಂತಿ’ ಹಾಗೂ ‘ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ’ ಧಾರಾವಾಹಿಗಳು ಜನಪ್ರಿಯವಾಗಿದ್ದವು. ಕ್ರಿಕೆಟ್ ನಿರೂಪಣೆಯಲ್ಲಿ ಕೂಡ ಮಂದಿರಾ ಜನಮೆಚ್ಚುಗೆ ಗಳಿಸಿದ್ರು.

ಈಗ ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರದಲ್ಲಿ ಮಂದಿರಾ ಕಾಣಿಸಿಕೊಳ್ತಿದ್ದಾರೆ. ವಿಶೇಷ ಅಂದ್ರೆ ಸಾಹೋ ಚಿತ್ರದಲ್ಲಿರೋದು ಕೇವಲ ಎರಡೇ ಮಹಿಳಾ ಪಾತ್ರಗಳು. ನಾಯಕಿ ಶ್ರದ್ಧಾ ಕಪೂರ್ ಹಾಗೂ ಮಂದಿರಾ ಬೇಡಿ ಮಾತ್ರ. ಮಂದಿರಾರದ್ದು ನೆಗೆಟಿವ್ ಶೇಡ್ ಇರೋ ಪಾತ್ರ.

ಈಗಾಗ್ಲೇ ಮಂದಿರಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಆ್ಯಕ್ಷನ್ ಸೀನ್ ಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ತ್ರಿಭಾಷಾ ಚಿತ್ರ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಹೈದ್ರಾಬಾದ್, ಮುಂಬೈ ಮತ್ತು ಅಬುಧಾಬಿಯಲ್ಲಿ ಚಿತ್ರೀಕರಣ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...