alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 5 ತಿಂಗಳಲ್ಲೇ ಮುರಿದು ಬಿತ್ತು ಬಾಲಿವುಡ್ ನಟಿಯ ದಾಂಪತ್ಯ!

mandana-karimi_640x480_61499144166

ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ನಟಿ ಮಂದನಾ ಕರಿಮಿ ಮದುವೆಯಾಗಿ ಕೇವಲ 5 ತಿಂಗಳಲ್ಲೇ ಪತಿಯ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದಾಳೆ. ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಪತಿ ಗೌರವ್ ಗುಪ್ತಾ ವಿರುದ್ಧ ದೂರು ನೀಡಿದ್ದಾಳೆ.

man

ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮಂದನಾ ಕರಿಮಿ ಸ್ಪರ್ಧಿಸಿದ್ಲು. ಕಳೆದ ಜನವರಿಯಲ್ಲಿ ಮುಂಬೈ ಮೂಲದ ಉದ್ಯಮಿ ಗೌರವ್ ಗುಪ್ತಾನನ್ನು ಮಂದನಾ ವರಿಸಿದ್ದಾಳೆ. 7 ವಾರಗಳ ಹಿಂದೆ ಅತ್ತೆ-ಮಾವ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಅಂತಾ ಮಂದನಾ ಆರೋಪಿಸಿದ್ದಾಳೆ.

ಅಷ್ಟೇ ಅಲ್ಲ ಗೌರವ್ ಕೂಡ ತನ್ನಿಂದ ದೂರವಾಗಿದ್ದು, ಪ್ರತಿ ತಿಂಗಳು 10 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ದೂರಿನಲ್ಲಿ ಒತ್ತಾಯಿಸಿದ್ದಾಳೆ. ಗಂಡನ ಮನೆಯಲ್ಲಿ ತಾನು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಒತ್ತಡದಿಂದಾಗಿ ತನ್ನ ವೃತ್ತಿ ಮತ್ತು ಉದ್ಯಮಕ್ಕೆ ನಷ್ಟವಾಗಿದ್ದು, 2 ಕೋಟಿ ರೂಪಾಯಿ ಕೊಡಬೇಕೆಂದು ಕೇಳಿದ್ದಾಳೆ.

mandana-gaurav-2

‘ಕ್ಯಾ ಕೂಲ್ ಹೈ ಹಮ್-3’, ಮೆ ಔರ್ ಚಾರ್ಲ್ಸ್ ಸೇರಿ ಹಲವು ಚಿತ್ರಗಳಲ್ಲಿ ಮಂದನಾ ನಟಿಸಿದ್ದಾಳೆ. ಮದುವೆ ನಂತರ ಸಿನೆಮಾಗಳಲ್ಲಿ ಕೆಲಸ ಮಾಡದಂತೆ ಗಂಡನ ಮನೆಯವರು ತಡೆದಿದ್ದಾರೆ. ಧರ್ಮ ಬದಲಾಯಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಅಂತಾ ಮಂದನಾ ದೂರಿದ್ದಾಳೆ.

ಮಂದನಾ ಕರಿಮಿ ಹಾಗೂ ಗೌರವ್ ಗುಪ್ತಾ 2 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ರು. ಜನವರಿ 26ರಂದು ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ನಂತರ ಮಾರ್ಚ್ 5ರಂದು ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...