alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಲಿಕಾ ಶೆರಾವತ್ ಬಿಚ್ಚಿಟ್ಟಿದ್ದಾರೆ ಬೆಚ್ಚಿ ಬೀಳಿಸುವ ‘ರಹಸ್ಯ’

ದಶಕದ ಹಿಂದಿನ ಬಾಲಿವುಡ್ ನ ಹಾಟ್ ಬೇಬ್ ಮರ್ಡರ್ ಫೇಮ್ ನ ಮಲ್ಲಿಕಾ ಶೆರಾವತ್ ಕಾಸ್ಟಿಂಗ್ ಕೌಚ್ ಬಗ್ಗೆ ಹೊಸ ವಿವಾದದ ಬಾಂಬ್ ಒಂದನ್ನ ಸಿಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ವಿರೋಧಿಸಿದ ಸಲುವಾಗಿಯೇ ತಾನು ಅನೇಕ ಸಿನಿಮಾಗಳಿಂದ ಅವಕಾಶ ವಂಚಿತಳಾಗಬೇಕಾಯ್ತು ಅಂತ ಮಲ್ಲಿಕಾ ಬಾಲಿವುಡ್ ರಹಸ್ಯ ಬಯಲಿಗೆಳೆದಿದ್ದಾರೆ.

ಮರ್ಡರ್ ಸಿನಿಮಾದ ನಂತರದಲ್ಲಿ ಮಲ್ಲಿಕಾಗೆ ಹೆಚ್ಚೆಚ್ಚು ಸಿನಿಮಾಗಳ ಅವಕಾಶ ಸಿಕ್ಕಿತ್ತು. ಹೀಗೆ ಸಿನಿಮಾದ ಚಿತ್ರೀಕರಣವೊಂದರ ಸಂದರ್ಭದಲ್ಲಿ ಸಹನಟನೊಂದಿಗೆ ತೆರೆಯ ಮೇಲೆ ಇಂಟಿಮೇಟ್ ದೃಶ್ಯಗಳು ಅಂದ್ರೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ನಟಿಸಬೇಕಿತ್ತು. ಚತ್ರೀಕರಣ ಮುಗಿದ ಮೇಲೂ ಆ ನಟ ಮಲ್ಲಿಕಾರನ್ನ ತನ್ನ ಕೋಣೆಗೆ ಕರೆದನಂತೆ. ಅದಕ್ಕೆ ಒಲ್ಲೆ ಅಂದ ಕಾರಣಕ್ಕೆ ಮಲ್ಲಿಕಾ ಚಿತ್ರರಂಗದಿಂದ ಅವಕಾಶ ವಂಚಿತಳಾದೆ ಅಂತ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಿರ್ದೇಶಕರು ಕೂಡ ಬೆಳಗಿನ ಜಾವ ಮೂರು ಗಂಟೆಗೆ ನನ್ನ ಕೋಣೆಗೆ ಬಾ ಅಂತ ಮಲ್ಲಿಕಾಗೆ ಆಹ್ವಾನ ನೀಡಿದ್ದರಂತೆ. ಇಂತದ್ದಕ್ಕೆಲ್ಲಾ ನಾನು ಒಪ್ಪಿಕೊಳ್ಳಲಿಲ್ಲ. ಆಫ್ ಸ್ಕ್ರೀನ್ ರೊಮ್ಯಾನ್ಸ್ ಗೆ ಕಾಂಪ್ರಮೈಸ್ ಆಗಲಿಲ್ಲ. ಈ ವಿಚಾರಗಳನ್ನ ಮಾತನಾಡೋಕೆ ನನಗೆ ಈ ಕ್ಷಣದಲ್ಲೂ ಭಯವಾಗ್ತಿದೆ ಅಂತ ಹೇಳಿದ್ದಾರೆ ಮಲ್ಲಿಕಾ.
ಕಾಂಪ್ರಮೈಸ್ ಆಗದ ಹಿನ್ನಲೆಯಲ್ಲೇ ನನ್ನನ್ನ ಚಿತ್ರರಂಗದಿಂದಲೇ ದೂರ ಇಡುವ ಪ್ರಯತ್ನಗಳು ನಡೀತು ಅಂತ ಹೊಸ ಬಾಂಬ್ ಸಿಡಿಸಿದ್ದಾರೆ ಮಲ್ಲಿಕಾ ಶೆರಾವತ್. ಮಲ್ಲಿಕಾಳ ಈ ಹೇಳಿಕೆ ಬಾಲಿವುಡ್ ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆಗಳು ದಟ್ಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...