alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಾರ್ಟ್ಮೆಂಟ್ ವಿವಾದದ ಬಗ್ಗೆ ಮಲ್ಲಿಕಾ ಹೇಳಿದ್ದೇನು…?

ನಟಿ ಮಲ್ಲಿಕಾ ಶೆರಾವತ್ ಮತ್ತವಳ ಪ್ರಿಯಕರನನ್ನು ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಹೊರದಬ್ಬಲಾಗಿದೆ ಅನ್ನೋ ಮಾಹಿತಿ ಇತ್ತು. 80,000 ಯುರೋಸ್ ಬಾಡಿಗೆ ಕಟ್ಟದೇ ಇದ್ದಿದ್ರಿಂದ ಮನೆ ಮಾಲೀಕ ಇಬ್ಬರನ್ನೂ ಹೊರಹಾಕಿದ್ದಾನೆ ಎನ್ನಲಾಗಿತ್ತು. ಆದ್ರೆ ಮಲ್ಲಿಕಾ ಇದನ್ನು ನಿರಾಕರಿಸಿದ್ದಾಳೆ.

2 ವರ್ಷಗಳ ಹಿಂದೆ ಫ್ರಾನ್ಸ್ ಉದ್ಯಮಿ ಸಿರಿಲ್ಲೆ ಆಕ್ಸನ್ಫನ್ಸ್ ನನ್ನು ಮಲ್ಲಿಕಾ ಶೆರಾವತ್ ಮದುವೆಯಾಗಿದ್ದಾಳೆ ಎನ್ನಲಾಗಿತ್ತು. ಇಬ್ಬರೂ ಒಂದೇ ಫ್ಲಾಟ್ ನಲ್ಲಿ ವಾಸವಾಗಿದ್ರು. ಅಪಾರ್ಟ್ಮೆಂಟ್ ಬಾಡಿಗೆ 61 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿರೋ ಇವರಿಗೆ ಎವಿಕ್ಷನ್ ನೋಟಿಸ್ ಕೊಡಲಾಗಿದೆಯಂತೆ. ಮನೆಯಲ್ಲಿರುವ ಐಷಾರಾಮಿ ವಸ್ತುಗಳು ಮತ್ತು ವಾಚ್ ಅನ್ನು ವಶಕ್ಕೆ ಪಡೆಯಲು ಮನೆ ಮಾಲೀಕ ಅವಕಾಶ ಕೇಳಿದ್ದಾನೆ.

ಈ ವಿವಾದ ಈಗಾಗ್ಲೇ ಫ್ರಾನ್ಸ್ ಕೋರ್ಟ್ ಮೆಟ್ಟಿಲೇರಿದೆ. ಆದ್ರೆ ಮಲ್ಲಿಕಾ ಹೇಳೋದೇ ಬೇರೆ, ತಾನು ಪ್ಯಾರಿಸ್ ನಲ್ಲಿ ಉಳಿದೇ ಇಲ್ಲ. ಸದ್ಯ ಮುಂಬೈನಲ್ಲಿದ್ದೇನೆ, ಇದಕ್ಕೂ ಮುನ್ನ ಕುಟುಂಬದವರೊಂದಿಗೆ ಲಾಸ್ ಎಂಜಲೀಸ್ ನಲ್ಲಿದ್ದೆ. ಅನುಮಾನವಿದ್ರೆ ನನ್ನ ಇನ್ ಸ್ಟಾಗ್ರಾಮ್ ಫೋಟೋ ನೋಡಿ ಎನ್ನುತ್ತಿದ್ದಾಳೆ.

ಕಳೆದ ನವೆಂಬರ್ ನಲ್ಲಿ ಮಲ್ಲಿಕಾ ಮೇಲೆ ದರೋಡೆಕೋರರು ದಾಳಿ ಕೂಡ ಮಾಡಿದ್ದರು. ಆದ್ರೀಗ ಆಕೆ ತನಗೂ ಪ್ಯಾರಿಸ್ ಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾಳೆ. ಇನ್ನೊಂದೆಡೆ ಉದ್ಯಮಿ ಸಿರಿಲ್ಲೆ ಜೊತೆ ಸ್ವಿಡ್ಜರ್ಲೆಂಡ್ ಸುತ್ತಿದ್ದ ಮಲ್ಲಿಕಾ, ಆತನ ಜೊತೆಗೆ ಹತ್ತಾರು ಫೋಟೋಗಳಲ್ಲಿ ಕಾಣಿಸಿಕೊಂಡಿದ್ಲು.

ಇಬ್ಬರೂ ಯುರೋಪ್ ನಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರಂತೆ. ಆದ್ರೆ ಆತ ತನ್ನ ಗಂಡನಲ್ಲ, ಸ್ನೇಹಿತ ಅಷ್ಟೆ ಅಂತಾ ಮಲ್ಲಿಕಾ ಹೇಳ್ತಿದ್ದಾಳೆ. ಅಪಾರ್ಟ್ಮೆಂಟ್ ನಲ್ಲಿ ದರೋಡೆ ನಡೆದ ಸಂದರ್ಭದಲ್ಲಿ ಸಿರಿಲ್ಲೆ ಕೂಡ ಇದ್ದ. ಐಷಾರಾಮಿ ಕಾರು ಸೇರಿದಂತೆ ಹತ್ತಾರು ಗಿಫ್ಟ್ ಕೂಡ ಮಲ್ಲಿಕಾಗೆ ಕೊಟ್ಟಿದ್ದಾನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...