alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಬಾಲಿವುಡ್ ನಟಿಯನ್ನು ಹೊರದಬ್ಬಿದ್ದೇಕೆ ಗೊತ್ತಾ…?

ಬಾಡಿಗೆ ಪಾವತಿಸದ ನಟಿ ಮಲ್ಲಿಕಾ ಶೆರಾವತ್ ಳನ್ನು ಪ್ಯಾರಿಸ್ ಅಪಾರ್ಟ್ಮೆಂಟ್ ನಿಂದ ಹೊರಹಾಕುವಂತೆ ಫ್ರಾನ್ಸ್ ನ ಕೋರ್ಟ್ ಸೂಚನೆ ನೀಡಿದೆ. ಮಲ್ಲಿಕಾ ಮತ್ತವಳ ಪತಿ ಸಿರಿಲ್ಲೆ ಆಕ್ಸನ್ಫನ್ಸ್ ಅಪಾರ್ಟ್ಮೆಂಟ್ ಗೆ 94,000 ಡಾಲರ್ ಬಾಡಿಗೆ ಕಟ್ಟಬೇಕಿತ್ತು.

ಬಾಡಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿದ್ದ ಪೀಠೋಪಕರಣಗಳನ್ನು ವಶಪಡಿಸಿಕೊಳ್ಳಲು ಡಿಸೆಂಬರ್ 14ರಂದೇ ಕೋರ್ಟ್ ಆದೇಶ ನೀಡಿತ್ತು. 2017ರ ಜನವರಿ 1ರಿಂದ ಮಲ್ಲಿಕಾ ಹಾಗೂ ಸಿರಿಲ್ಲೆ ಈ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡಲು ಆರಂಭಿಸಿದ್ದರು.

ಪ್ರತಿ ತಿಂಗಳು 6054 ಯುರೋಸ್ ಬಾಡಿಗೆ ಕಟ್ಟಬೇಕಿತ್ತು. ಒಮ್ಮೆ 2715 ಡಾಲರ್ ಪಾವತಿಸಿದ್ದು ಬಿಟ್ರೆ, ಬಳಿಕ ಬಾಡಿಗೆಯನ್ನೇ ಕೊಟ್ಟಿರಲಿಲ್ಲ. ಹಾಗಾಗಿ ಅಪಾರ್ಟ್ಮೆಂಟ್ ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದ. ಇದೀಗ ಆತನ ಪರವಾಗಿ ಕೋರ್ಟ್ ತೀರ್ಪು ನೀಡಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...