alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಲಯಾಳಿ ಮದುವೆಯ ಈ ಡಾನ್ಸ್

ಮಲಯಾಳಿ ಮದುವೆಗಳಲ್ಲಿ ಸಂಪ್ರದಾಯ, ಆಚರಣೆಗಳಿಗೇನೂ ಬರವಿಲ್ಲ. ಮಲ್ಲು ಸ್ಟೈಲ್ ಮದುವೆ ಅಂದ್ರೆ ಎಲ್ಲರಲ್ಲೂ ಒಂದು ರೀತಿಯ ಕುತೂಹಲ ಸಹಜ. ಯಾಕಂದ್ರೆ ಮದುವೆಗಳು ಅಷ್ಟು ವಿಶಿಷ್ಟ ಮತ್ತು ವಿಭಿನ್ನವಾಗಿರುತ್ತವೆ.

ಮಲಯಾಳಂ ನಟಿ ಅಶ್ವಥಿ ವಾರಿಯರ್ ಹಾಗೂ ನಟ ಅಭಿಲಾಷ್ ಉಣ್ಣಿಕೃಷ್ಣನ್ ಮದುವೆ ವಿಡಿಯೋ ಈಗ ವೈರಲ್ ಆಗಿದೆ. ಮದುವೆ ಮನೆಯಲ್ಲೇ ಹಾಡೊಂದನ್ನು ಶೂಟ್ ಮಾಡಲಾಗಿದೆ.

ನವದಂಪತಿ ಜೊತೆಗೆ ಅತಿಥಿಗಳು ಕೂಡ ಹೆಜ್ಜೆ ಹಾಕಿರೋದು ವಿಶೇಷ. ಐ ಆ್ಯಮ್ ಎ ಮಲ್ಲು ಅನ್ನೋ ಹಾಡಿಗೆ ಅಶ್ವಥಿ ಹಾಗೂ ಅಭಿಲಾಷ್ ಸಖತ್ತಾಗಿ ಸ್ಪೆಪ್ ಹಾಕಿದ್ದಾರೆ. ಹಾಡಿನಲ್ಲಿ ಮದುವೆ ಮನೆಯನ್ನೆಲ್ಲ ಪರಿಚಯಿಸಲಾಗಿದೆ.

ವೈರಲ್ ಆಗಿರೋ ಸೆಲೆಬ್ರಿಟಿ ಮದುವೆಯ ಈ ವಿಡಿಯೋ ಸಖತ್ ಹಿಟ್ ಆಗಿದೆ. ಅಷ್ಟೇ ಅಲ್ಲ ಅಭಿಮಾನಿಗಳಿಗೂ ಇಷ್ಟವಾಗಿದೆ. ತರಹೇವಾರಿ ಕಮೆಂಟ್ಸ್ ಕೂಡ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...