alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೆ ಹುಡುಗಿಯ ಮತ್ತಷ್ಟು ಇಂಟ್ರಸ್ಟಿಂಗ್ ಸಂಗತಿಗಳು

ಮಲೆಯಾಳಂ ಸೆನ್ಸೇಷನಲ್ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ದೇಶಾದ್ಯಂತ ಹುಡುಗರ ಹೃದಯದಲ್ಲಿ ಮನೆ ಮಾಡಿರುವ ಹುಡುಗಿ. ಕಣ್ಣು ಮಿಟುಕಿಸೋ ಮೂಲಕ ಹುಡುಗರ ಹಾರ್ಟ್ ಬೀಟ್ ಏರಿಸಿರೋ ಈ ಪ್ರಿಯಾ ಬಗ್ಗೆ ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ.

ಪ್ರಿಯಾಗೆ ಶಾರುಖ್ ಖಾನ್, ರಣವೀರ್ ಸಿಂಗ್, ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ದೀಪಿಕಾ ಪಡುಕೋಣೆ ಜೊತೆ ಸ್ಕ್ರೀನ್ ಶೇರ್ ಮಾಡುವ ಆಸೆ ಇದೆಯಂತೆ.

18 ವರ್ಷದ ಪ್ರಿಯಾ ವಾರಿಯರ್ ಕೇರಳದ ವಿಮಲಾ ಕಾಲೇಜಿನಲ್ಲಿ ಬಿಕಾಂ ಪದವಿ ಓದುತ್ತಿದ್ದಾರೆ. ಆಕೆ ತಮ್ಮ ಫೇಸ್ಬುಕ್ ಪೇಜ್ ನಲ್ಲಿ 45 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಮಲೆಯಾಳಂ ಚಿತ್ರ ಒರು ಆದಾರ್ ಲವ್ ಈಕೆಯ ಮೊದಲ ಚಿತ್ರ.

ಹೊಸ ಸೆನ್ಸೇಷನ್ ಹುಟ್ಟು ಹಾಕಿರುವ ಪ್ರಿಯಾ ನಟಿಸಿದ್ದ ಮಾಣಿಕ್ಯಮಲರಾಯ ಪೂವಿ ಹಾಡು ಯುಟ್ಯೂಬ್ ನಲ್ಲಿ 8 ಮಿಲಿಯನ್ ಅಂದ್ರೆ 80 ಲಕ್ಷಕ್ಕೂ ಹೆಚ್ಚು ಬಾರಿ ನೋಡಲ್ಪಟ್ಟಿದೆ.

ಪ್ರಿಯಾ ವಾರಿಯರ್ ಒಂದೇ ದಿನದಲ್ಲಿ ಇನ್ಸ್ಟಾಗ್ರಾಂ ನಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಪ್ರಿಯಾ ಸಂಗೀತ ಹಾಗೂ ನೃತ್ಯದ ಬಹು ದೊಡ್ಡ ಅಭಿಮಾನಿ. ಈಕೆ ಮೋಹಿನಿ ಅಟ್ಟಂ ನೃತ್ಯ ಪ್ರಾಕಾರವನ್ನು ಕಲಿತಿದ್ದಾರೆ ಕೂಡ.

ನ್ಯಾಷನಲ್ ಕ್ರಶ್ ಉಂಟು ಮಾಡಿರೋ ಪ್ರಿಯಾ ಪ್ರಕಾಶ್ ವಾರಿಯರ್ ಸೋಷಿಯಲ್ ಮೀಡಿಯಾದಲ್ಲಿ ಟಾಪ್ ಟ್ರೆಂಡ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...