alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಶಾಕ್ ! ನಿಗೂಢವಾಗಿ ಮೃತಪಟ್ಟ ಮತ್ತೊಬ್ಬ ನಟ

ಮಲಯಾಳಂ ಚಿತ್ರ ನಟ ಸಿಧು ಆರ್. ಪಿಳ್ಳೈ ಅವರ ಮೃತದೇಹ ಗೋವಾ ಬೀಚ್ ನಲ್ಲಿ ಪತ್ತೆಯಾಗಿದೆ. ‘ಸೆಕೆಂಡ್ ಶೋ’, ‘ಚಿತ್ರಂ’, ‘ವಂದನಂ’, ‘ಅಮೃತಂ ಗಮಯ’ ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ಸಿಧು ಜನವರಿ 12 ರಂದು ಗೋವಾ ಪ್ರವಾಸಕ್ಕೆ ತೆರಳಿದ್ದು, ಕಡಲ ಕಿನಾರೆಯಲ್ಲಿ ಅವರ ಮೃತದೇಹ ಕಂಡು ಬಂದಿದೆ. ಸಾವಿಗೆ ಕಾರಣವೇನೆಂಬುದು ಗೊತ್ತಾಗಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತವರೂರು ತ್ರಿಶೂರ್ ನಿಂದ ಅವರು ಗೋವಾ ಪ್ರವಾಸಕ್ಕೆ ತೆರಳಿದ್ದು, ಅವರ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಬಹುಭಾಷಾ ನಟ ಕಲಾಭವನ್ ಮಣಿ ಅವರು ನಿಗೂಢವಾಗಿ ಸಾವು ಕಂಡಿದ್ದರು. ಮತ್ತೆ ಮಲಯಾಳಂ ನಟರೊಬ್ಬರು ನಿಗೂಢವಾಗಿ ಮೃತಪಟ್ಟಿದ್ದಾರೆ.

ಸಿಧು ನಿಧನಕ್ಕೆ ನಟ ದಿಲ್ಕುರ್ ಸಲ್ಮಾನ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...