alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಚಿತ್ರಕ್ಕೆ ತನ್ನ ಮುಖ ಹೊಂದಿಸಿದ್ದವರಿಗೆ ನಟಿಯ ಖಡಕ್ ಉತ್ರ

jyothi krishnaಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಮಲಯಾಳಿ ನಟಿಯೊಬ್ಬರ ಬೆತ್ತಲೆ ಚಿತ್ರ ಹರಿದಾಡುತ್ತಿತ್ತು. ಅಶ್ಲೀಲ ಚಿತ್ರಗಳ ತಾರೆಯ ಫೋಟೋಗೆ ಮಲಯಾಳಿ ನಟಿಯ ಮುಖವನ್ನು ಫೋಟೋಶಾಪ್ ಮೂಲಕ ಎಡಿಟ್ ಮಾಡಿ ವಿಕೃತನೊಬ್ಬ ಇದನ್ನು ಹರಿಬಿಟ್ಟಿದ್ದ ಎನ್ನಲಾಗಿದೆ. ಸಾಮಾಜಿಕ ಜಾಲ ತಾಣದ ಮೂಲಕವೇ ನಟಿ ಆ ಕೃತ್ಯವೆಸಗಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.

‘ಗಾಡ್ ಫಾರ್ ಸೇಲ್’ ಸೇರಿದಂತೆ ಹಲವು ಮಲಯಾಳಿ ಚಿತ್ರಗಳಲ್ಲಿ ನಟಿಸಿರುವ ಜ್ಯೋತಿ ಕೃಷ್ಣಾ, ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಕಿಡಿ ಕಾರಿದ್ದು, ಆ ವ್ಯಕ್ತಿಯ ತಾಯಿ ಅಥವಾ ಸಹೋದರಿಯ ಭಾವ ಚಿತ್ರಕ್ಕೆ ತಮ್ಮ ಮುಖವನ್ನು ಪೇಸ್ಟ್ ಮಾಡಿರಬಹುದೆಂದು ಮಾರ್ಮಿಕವಾಗಿ ಹೇಳಿದ್ದಾರೆ.

ಜೊತೆಗೆ ಈ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಂತವರೆಲ್ಲರಿಗೂ ಧನ್ಯವಾದ ಹೇಳಿರುವ ಜ್ಯೋತಿ ಕೃಷ್ಣಾ, ವೈಯಕ್ತಿಕವಾಗಿ ತಮ್ಮ ಬಗ್ಗೆ ತಿಳಿದಿರುವವರು ಈ ಚಿತ್ರದ ಹಿಂದಿನ ಮರ್ಮ ಅರಿತಿದ್ದರು ಎಂದಿದ್ದಾರೆ. ಜ್ಯೋತಿ ಕೃಷ್ಣಾ ಅವರ ಈ ಫೇಸ್ ಬುಕ್ ಪೋಸ್ಟ್ ಗೆ ಆಪಾರ ಸಂಖ್ಯೆಯಲ್ಲಿ ಲೈಕ್ಸ್ ಹಾಗೂ ಕಮೆಂಟ್ ಗಳು ಬಂದಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...