alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ಕ್ಷಣದಲ್ಲಿ ಕೈ ಕೊಟ್ಟ ಮಲೈಕಾ, ಕಾರಣವೇನು ಗೊತ್ತಾ…?

ಬಾಲಿವುಡ್ ನ ಮುನ್ನಿ ಮಲೈಕಾ ಅರೋರಾ ಒಪ್ಪಿಕೊಂಡಿದ್ದ ಷೋ ಒಂದರಿಂದ ಅಂತಿಮ ಕ್ಷಣದಲ್ಲಿ ಭಾಗವಹಿಸದೆ ಉಳಿದಿರುವ ಘಟನೆ ನಡೆದಿದೆ. ಕಾರ್ಯಕ್ರಮದ ಆಯೋಜಕರು ಒಪ್ಪಿಕೊಂಡಿದ್ದ ಸಂಭಾವನೆಯ ಹಣವನ್ನು ಪಾವತಿಸದ ಹಿನ್ನಲೆಯಲ್ಲಿ ಮಲೈಕಾ ಷೋ ನಿಂದ ಹೊರಗುಳಿದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಷೋ ಒಂದಕ್ಕೆ ಮಲೈಕಾರನ್ನ ಆಯೋಜಕರು ಆಹ್ವಾನಿಸಿದ್ದರು. ಈ ಕಾರ್ಯಕ್ರಮದಲ್ಲಿ ಅರೋರ ಡ್ಯಾನ್ಸ್ ಪರ್ಫಾಮೆನ್ಸ್ ನೀಡಬೇಕಿತ್ತು. ಅದಕ್ಕೆ ಸೂಕ್ತ ಸಂಭಾವನೆಯನ್ನು ನಿಗದಿಪಡಿಸಿದ್ದರು. ಆದ್ರೆ ಆಯೋಜಕರು ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಸಂಭಾವನೆ ಸಿಗದೆ ಕಾರ್ಯಕ್ರಮಕ್ಕೆ ಬರೋದಿಲ್ಲ ಅನ್ನೋ ವಿಚಾರವನ್ನ ಆರಂಭಿಕ ಹಂತದಲ್ಲೇ ಮಲೈಕಾ ಅರೋರ ಆಯೋಜಕರಿಗೆ ತಿಳಿಸಿದ್ದರಂತೆ. ಹಾಗಿದ್ದರು ಅಂತಿಮ ಕ್ಷಣದವರೆಗೂ ಬಾಕಿ ಉಳಿದಿರುವ ಸಂಭಾವನೆ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದರು ಅಂತ ಹೇಳಲಾಗ್ತಿದೆ.

ಆದ್ರೆ ಅರೋರ ಷೋ ನಿಂದ ಹಿಂದೆ ಸರಿದಿದ್ದರ ಬಗ್ಗೆ ಆಯೋಜಕರು ಬೇರೆಯದ್ದೇ ಕಾರಣ ಹೇಳ್ತಾರೆ. ಷೋ ಗೆ ಮೊದಲು ಒಪ್ಪಿಕೊಂಡ ಅರೋರ ಆನಂತರದಲ್ಲಿ ದಿನಾಂಕವನ್ನು ಬದಲಿಸುವಂತೆ ಕೇಳಿಕೊಂಡರು. ಈ ವಿಚಾರದಲ್ಲಿ ಮಲೈಕಾ ಮತ್ತು ಆಯೋಜಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಮಲೈಕಾ ಸಂಭಾವನೆ ವಿಚಾರದಲ್ಲಿ ತಗಾದೆ ತೆಗೆದು ಷೋ ನಿಂದ ಹೊರಗುಳಿದಿದ್ದಾರೆ ಅಂತ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...