alex Certify
ಕನ್ನಡ ದುನಿಯಾ       Mobile App
       

Kannada Duniya

“ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಲಾಗುತ್ತೆ ಮದ್ಯ’’

ನಟಿ ಮಹಿಮಾ ಸಿಂಗ್ ಪುರಿ ಹೆಸರು ಅನೇಕ ದಿನಗಳಿಂದ ಚರ್ಚೆಯಲ್ಲಿದೆ. ನಿರ್ದೇಶಕರೊಬ್ಬರ ಮೇಲೆ ಕಿರುಕುಳ ಆರೋಪ ಹೊರಿಸಿದ್ದ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಮಹಿಮಾ ಸಿಂಗ್ ಪುರಿ ನ್ಯೂಡ್ ಫೋಟೋವೊಂದು ವೈರಲ್ ಆಗಿದೆ. ಇದ್ರ ಜೊತೆಗೆ ಮಹಿಮಾ ಬಿಗ್ ಬಾಸ್ -11 ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಮಹಿಳಾ ಸಂಪೂರ್ಣ ಬೆತ್ತಲಾಗಿದ್ದಾಳೆ. ಈ ಫೋಟೋ ಮಹಿಮಾಳ ಮುಂದಿನ ಲವ್ ಸೆಕ್ಸ್ ಪ್ಯಾಶನ್ ಚಿತ್ರದ್ದಾಗಿದೆ. ಚಿತ್ರದ ಈ ದೃಶ್ಯವನ್ನು ಕತ್ತರಿಸುವಂತೆ ಸೆನ್ಸಾರ್ ಬೋರ್ಡ್ ಹೇಳಿತ್ತು. ಆದ್ರೂ ಚಿತ್ರದ ಪೋಸ್ಟರ್ ಲೀಕ್ ಆಗಿದೆ. ಮೊಬೈಲ್ ಕ್ಯಾಮರಾದಲ್ಲಿ ಈ ದೃಶ್ಯವನ್ನು ಶೂಟ್ ಮಾಡಲಾಗಿದೆ. ಭೋಜ್ಪುರಿ ನಿರ್ದೇಶಕ ರಾಮ್ ಸಿಂಗ್ ಗುಪ್ತಾ ಇದನ್ನು ನಿರ್ದೇಶಿಸಿದ್ದಾರೆ. ಲೀಕ್ ಆಗಿರುವ ಪೋಸ್ಟರ್ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಸಂದರ್ಭದಲ್ಲಿಯೇ ಮಹಿಮಾ ಬಿಗ್ ಬಾಸ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾಳೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಿಗೆ ಮದ್ಯ ನೀಡಲಾಗುತ್ತದೆ. ಗಲಾಟೆ ಹೆಚ್ಚು ಮಾಡಲು ತಯಾರಕರು ಪ್ರೋತ್ಸಾಹ ನೀಡ್ತಾರೆ. ಇದಕ್ಕಾಗಿಯೇ ಮದ್ಯ ನೀಡ್ತಾರೆಂದು ಮಹಿಮಾ ಗಂಭೀರ ಆರೋಪ ಮಾಡಿದ್ದಾಳೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...