alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಪೊಲೀಸ್ ಕೈ ಸೇರಿದ ಓಂಪುರಿ ಮೊಬೈಲ್

omprui

ಹಿರಿಯ ನಟ ಓಂಪುರಿ ನಿಧನರಾಗಿ ಐದು ದಿನಗಳ ನಂತ್ರ ಅವರ ಮೊಬೈಲ್ ಫೋನ್ ಪೊಲೀಸರ ಕೈ ಸೇರಿದೆ. ಎರಡನೇ ಪತ್ನಿ ನಂದಿನಿ ಬಳಿ ಇದ್ದ ಫೋನನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆದ್ರೆ ಯಾವುದೇ ಅನುಮಾನಾಸ್ಪದ ವಿಷಯ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಒಶಿವಾರಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಭಾಷ್, ಈವರೆಗೆ ನಿಯಮದ ವಿರುದ್ಧವಾದ ಯಾವುದೇ ವಿಷಯ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಮೊಬೈಲ್ ನಲ್ಲಿ ಯಾವುದೇ ಸಂದೇಹಾಸ್ಪದ ಸಂಗತಿ ಸಿಕ್ಕಿಲ್ಲ. ಯಾಕೆ ಜನರು ಮನ ಬಂದಂತೆ ಮಾತನಾಡ್ತಿದ್ದಾರೆಂಬುದು ನನಗೆ ತಿಳಿಯುತ್ತಿಲ್ಲ ಎಂದು ಸುಭಾಷ್ ಹೇಳಿದ್ದಾರೆ.

ಓಂ ಪುರಿ ಸಾವಿಗೆ ಕಾರಣವೇನು ಎಂಬುದು ಫಾರೆನ್ಸಿಕ್ ವರದಿ ಬಂದ ನಂತ್ರವೇ ಸ್ಪಷ್ಟವಾಗಲಿದೆ. ಇನ್ನು 30-40 ದಿನ ಬೇಕೆಂದು ಹೇಳಲಾಗ್ತಾ ಇದೆ. ತನಿಖೆ ಮುಂದುವರೆದಿದ್ದು, ಸಾವಿನ ಹಿಂದೆ ಪಿತೂರಿ ಇದೆ ಎಂಬ ಬಗ್ಗೆ ಯಾವುದೇ ದಾಖಲೆ ಸಿಕ್ಕಿಲ್ಲ ಎಂದು ಸುಭಾಷ್ ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...