alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳೆದುರಲ್ಲೇ ಶಾರೂಕ್ ಗೆ ಭಾರೀ ಮುಖಭಂಗ

ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್ ನವೆಂಬರ್ 2 ರಂದು ತಮ್ಮ 52 ನೇ ಹುಟ್ಟು ಹಬ್ಬವನ್ನು ಕುಟುಂಬ ಹಾಗೂ ಚಿತ್ರೋದ್ಯಮದ ಗೆಳೆಯರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಶಾರೂಕ್ ಖಾನ್ ಗೆ ಭಾರೀ ಮುಖಭಂಗವಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಶಾರೂಕ್ ಖಾನ್, ಹುಟ್ಟು ಹಬ್ಬದ ಆಚರಣೆಗೆಂದು ಆಲಿಭಾಗ್ ಗೆ ತೆರಳಿದ್ದು, ಅವರ ಐಷಾರಾಮಿ ಬೋಟ್ ನಲ್ಲಿ ಕುಳಿತಿದ್ದ ವೇಳೆ ಆಲಿಭಾಗ್ ನಿವಾಸಿಯಾಗಿರುವ ವಿಧಾನ ಪರಿಷತ್ ಸದಸ್ಯ ಜಯಂತ್ ಪಾಟೀಲ್ ಅಲ್ಲಿಗೆ ಬಂದಿದ್ದಾರೆ. ಮುಂಬೈಗೆ ಹೊರಟಿದ್ದ ಜಯಂತ್ ಪಾಟೀಲ್ ತಮ್ಮ ಬೋಟ್ ಗೆ ತೆರಳಲು ಮುಂದಾದಾಗ ಶಾರೂಕ್ ತಮ್ಮ ಬೋಟ್ ನಿಂದ ಹೊರ ಬಂದಿಲ್ಲ.

ಹೀಗಾಗಿ ಶಾರೂಕ್ ಖಾನ್ ಬೋಟ್ ನಿಂದಲೇ ತಮ್ಮ ಬೋಟ್ ಗೆ ಹೋದ ಜಯಂತ್ ಪಾಟೀಲ್, ಶಾರೂಕ್ ವಿರುದ್ದ ಕೂಗಾಡಿದ್ದಾರೆ. ನೀವು ಸೂಪರ್ ಸ್ಟಾರ್ ಆಗಿಬಹುದು ಆದರೆ ಆಲಿಭಾಗ್ ಖರೀದಿಸಿಲ್ಲವೆಂದಿದ್ದಾರೆ. ಇದೆಲ್ಲ ಘಟನೆ ಸ್ಥಳದಲ್ಲಿದ್ದ ಶಾರೂಕ್ ಖಾನ್ ಅಭಿಮಾನಿಗಳ ಸಮ್ಮುಖದಲ್ಲೇ ನಡೆದಿದೆ. ಜಯಂತ್ ಪಾಟೀಲ್ ರ ಕೂಗಾಟಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಕೆಲ ಕಾಲದ ನಂತರ ತಮ್ಮ ಬೋಟ್ ನಿಂದ ಹೊರ ಬಿದ್ದ ಶಾರೂಕ್ ಏನೂ ನಡೆದೇ ಇಲ್ಲವೇನೋ ಎಂಬಂತೆ ಅಭಿಮಾನಿಗಳೆಡೆ ವಿಷ್ ಮಾಡಿ ಅಲ್ಲಿಂದ ತೆರಳಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...