alex Certify
ಕನ್ನಡ ದುನಿಯಾ       Mobile App
       

Kannada Duniya

`ಬಾಹುಬಲಿ’ಗೆ ಅಮೀರ್ ನೀಡ್ತಾರಂತೆ ಈ ಪಾತ್ರ

ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ 1000 ಕೋಟಿ ರೂಪಾಯಿ ಬಜೆಟ್ ನಲ್ಲಿ ಮಹಾಭಾರತಕ್ಕೆ ಕೈ ಹಾಕ್ತಿದ್ದಾರೆ. ಈ ಚಿತ್ರದ ಮೇಲೆ ಅಮೀರ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ‘ಬಾಹುಬಲಿ’ ಪ್ರಭಾಸ್ ಗೆ ಬಹುಮುಖ್ಯ ಪಾತ್ರ ನೀಡಲು ಅಮೀರ್ ಮುಂದಾಗಿದ್ದಾರಂತೆ.

ಬಾಹುಬಲಿ ಮೂಲಕ ವಿಶ್ವದ ಜನರ ಗಮನ ಸೆಳೆದ ಪ್ರಭಾಸ್ ನಮ್ಮ ಚಿತ್ರದಲ್ಲಿರಲಿ ಎಂಬುದು ಅಮೀರ್ ಬಯಕೆ. ಈಗಾಗಲೇ ಚಿತ್ರದ ಮೇಲೆ ಅಮೀರ್ ಕೆಲಸ ಶುರು ಮಾಡಿದ್ದಾರೆ. ಪ್ರಭಾಸ್ ಗೆ ಆಫರ್ ನೀಡಿಯಾಗಿದೆ. ಮಹಾಭಾರತ್ ಚಿತ್ರಕ್ಕೆ ಮುಕೇಶ್ ಅಂಬಾನಿ ಹಣ ನೀಡ್ತಿದ್ದಾರೆ. ಚಿತ್ರ ಮೂರು ಭಾಗವಾಗಿ ಮೂಡಿ ಬರಲಿದೆ.

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಿಂದ ಫ್ರೀಯಾಗಿರುವ ಅಮೀರ್, ಮಹಾಭಾರತ್ ಮೇಲೆ ಕೆಲಸ ಶುರು ಮಾಡಿದ್ದಾರೆ. ಯಾರಿಗೆ ಯಾವ ಪಾತ್ರ ಎಂಬ ಚರ್ಚೆ ನಡೆಯುತ್ತಿದೆ. ಅಮೀರ್, ಅರ್ಜುನನ ಪಾತ್ರದಲ್ಲಿ ಪ್ರಭಾಸ್ ನೋಡಲು ಇಷ್ಟಪಡ್ತಾರಂತೆ. ಒಂದು ವೇಳೆ ಪ್ರಭಾಸ್ ಅರ್ಜುನನ ಪಾತ್ರಕ್ಕೆ ಸೈ ಎಂದ್ರೆ ಕೃಷ್ಣನ ಪಾತ್ರದಲ್ಲಿ ಅಮೀರ್ ಮಿಂಚಲಿದ್ದಾರೆ. ದ್ರೌಪದಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಜೀವ ತುಂಬುವ ಸಾಧ್ಯತೆ ಹೆಚ್ಚಿದೆ. ಚಿತ್ರ ಮೂರು ಭಾಗವಾಗಿ ನಿರ್ಮಾಣವಾಗುವುದ್ರಿಂದ ಸುಮಾರು 10-15 ವರ್ಷ ಬೇಕೆಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...