alex Certify
ಕನ್ನಡ ದುನಿಯಾ       Mobile App
       

Kannada Duniya

‘ಸೂಪರ್ ಸ್ಟಾರ್’ ಅಳಿಯ ಧನುಷ್ ತಂದೆ, ತಾಯಿ ಯಾರು..?

dhanush-f

ಮಧುರೈ: ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ವಿವಾದಕ್ಕೆ ಸಿಲುಕಿದ್ದಾರೆ.

ಧನುಷ್ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕಸ್ತೂರಿ ರಾಜಾ ಅವರ ಮಗ, ಸ್ಟಾರ್ ನಿರ್ದೇಶಕ ಸೆಲ್ವ ರಾಘವನ್ ಸಹೋದರ ಎಂದೇ ಇದುವರೆಗೂ ಹೇಳಲಾಗಿತ್ತು. ಆದರೆ, ಧನುಷ್ ತಮ್ಮ ಮಗ ಎಂದು ಮಧುರೈ ಜಿಲ್ಲೆಯ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿ ಮೇಲೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪುತ್ರನ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

2002 ರಲ್ಲಿ 11 ನೇ ತರಗತಿ ಓದುತ್ತಿದ್ದ ಧನುಷ್ ಶಿವಗಂಗೆ ಜಿಲ್ಲೆ ತಿರುಪತ್ತೂರಿನಲ್ಲಿ ನಾಪತ್ತೆಯಾಗಿದ್ದು, ಆ ನಂತರದಲ್ಲಿ ಸಿನಿಮಾದಲ್ಲಿ ನೋಡಿ ಕಸ್ತೂರಿ ರಾಜಾ ಅವರ ಮನೆಗೆ ಅನೇಕ ಸಲ ಹೋದರೂ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ನಮ್ಮ ಪುತ್ರನ ಭೇಟಿಗೆ ಅವಕಾಶ ಕಲ್ಪಿಸಿ, ಜೀವನಾಂಶ ಕೊಡಿಸಬೇಕೆಂದು ಮನವಿ ಮಾಡಿರುವ ದಂಪತಿ, ಧನುಷ್ ಚಿಕ್ಕವಯಸ್ಸಿನ ಫೋಟೋ ಕೂಡ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 12 ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಧನುಷ್ ಗೆ ಸಮನ್ಸ್ ಜಾರಿ ಮಾಡಿದೆ. ಹಾಗಾದರೆ ಧನುಷ್ ನಿಜವಾದ ತಂದೆ- ತಾಯಿ ಯಾರು ಎಂಬ ಚರ್ಚೆ ತಮಿಳುನಾಡಿನಲ್ಲಿ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...