alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್, ಧನುಷ್ ಗೆ ಹೈಕೋರ್ಟ್ ನೋಟಿಸ್

ಚೆನ್ನೈ: ‘ಕಾಲಾ ಕರಿಕಾಲನ್’ ಚಿತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಚಿತ್ರದ ಕತೆ ತಮಗೆ ಸೇರಿದ್ದೆಂದು ಸಹಾಯಕ ನಿರ್ದೇಶಕ ರಾಜಶೇಖರನ್ ಅವರು, ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 2017 ರ ಅಕ್ಟೋಬರ್ ನಲ್ಲಿ ‘ಕರಿಕಾಲನ್’ ಟೈಟಲ್ ಅನ್ನು ದಕ್ಷಿಣ ಭಾರತೀಯ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾಗಿ ತಿಳಿಸಿದ್ದಾರೆ.

ಮುಂಬೈನಲ್ಲಿ ತುಳಿತಕ್ಕೆ ಒಳಗಾದ ತಮಿಳರ ಪರವಾಗಿ ಹೋರಾಡುವ ಗ್ಯಾಂಗ್ ಸ್ಟರ್ ಕರಿಕಾಲನ್ ಕತೆಯನ್ನು ಸಿದ್ಧಪಡಿಸಿಕೊಂಡು ದಶಕದ ಹಿಂದೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದು, ಅವರು ಅಭಿನಯಿಸಲು ಬಯಸಿದ್ದರು ಎಂದು ಅವರು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ‘ಕಾಲಾ ಕರಿಕಾಲನ್ ಚಿತ್ರದ ನಟ ರಜನಿಕಾಂತ್, ನಿರ್ಮಾಪಕ ಧನುಷ್, ನಿರ್ದೇಶಕ ಪ. ರಂಜಿತ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಉಳಿದ ಕೆಲಸಗಳಲ್ಲಿ ನಿರತವಾಗಿದೆ. ‘2.O’ ರಿಲೀಸ್ ಆದ ನಂತರ ‘ಕಾಲಾ ಕರಿಕಾಲನ್’ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...