alex Certify
ಕನ್ನಡ ದುನಿಯಾ       Mobile App
       

Kannada Duniya

21 ವರ್ಷಗಳ ನಂತ್ರ ಮತ್ತೆ ಒಂದಾಗ್ತಿದ್ದಾರೆ ಮಾಜಿ ಪ್ರೇಮಿಗಳು

ಬಾಲಿವುಡ್ ನಟ ಸಂಜಯ್ ದತ್ ಹಾಗೂ ನಟಿ ಮಾಧುರಿ ದೀಕ್ಷಿತ್ 21 ವರ್ಷಗಳ ನಂತ್ರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ‘ಕಳಂಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಕಳಂಕ್ ಚಿತ್ರದಲ್ಲಿ ಇಬ್ಬರೂ ನಟಿಸ್ತಿದ್ದಾರೆ, ಆದ್ರೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲವೆಂಬ ಸುದ್ದಿಯಿತ್ತು.

ವರದಿಯೊಂದರ ಪ್ರಕಾರ, ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಕೆಲ ದೃಶ್ಯಗಳ ಚಿತ್ರೀಕರಣ ನಡೆದಿದೆಯಂತೆ. ಆದ್ರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇತ್ತೀಚಿಗೆ ಈ ಬಗ್ಗೆ ಕೇಳಿದ್ದ ಪ್ರಶ್ನೆಗೆ ಮಾಧುರಿ ಸರಿಯಾಗಿ ಉತ್ತರ ನೀಡಿರಲಿಲ್ಲ. ಸಂಜಯ್ ದತ್ ಜೊತೆ ಮತ್ತೆ ಕಾಣಿಸಿಕೊಳ್ತಿದ್ದೀರಾ ಎಂಬ ಪ್ರಶ್ನೆಗೆ ಮಾಧುರಿ, ಕಳಂಕ್ ಚಿತ್ರದಲ್ಲಿ ವರುಣ್ ಧವನ್ ಹಾಗೂ ಆಲಿಯಾ ಕೂಡ ನಟಿಸುತ್ತಿದ್ದಾರೆಂದು ಪ್ರತಿಕ್ರಿಯೆ ನೀಡಿದ್ದರು.

ಸಂಜಯ್ ದತ್ ಜೊತೆ ದೃಶ್ಯವಿಲ್ಲದೆ ಹೋದ್ರೆ ಮಾತ್ರ ನಟನೆ ಮಾಡ್ತೇನೆಂದು ಮಾಧುರಿ, ಕರಣ್ ಗೆ ಹೇಳಿದ್ದರು ಎನ್ನಲಾಗಿದೆ. ಆದ್ರೆ ಈಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆಂಬ ಸುದ್ದಿಯಿದೆ. ಸಂಜಯ್ ಹಾಗೂ ಮಾಧುರಿ ಹಿಂದೆ ಪ್ರೇಮಿಗಳಾಗಿದ್ರು. ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡದೆ ಹೋದ್ರೂ ಇಬ್ಬರ ನಡುವೆ ಅನೇಕ ವರ್ಷಗಳ ಕಾಲ ಸಂಬಂಧವಿತ್ತು ಎಂಬುದು ಎಲ್ಲರಿಗೂ ಗೊತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...