alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಹೆಚ್ಚಿಸಿಕೊಳ್ಳಲು ಮಾಧವನ್ ಗೆ ಅಮೀರ್ ಖಾನ್ ಟಿಪ್ಸ್

ಬಹುಭಾಷಾ ನಟ ಆರ್. ಮಾಧವನ್ ಸಖತ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಮಾಧವನ್ ಅಭಿನಯದ ಸಾಲಾ ಖಡೂಸ್ ಹಾಗೂ ವಿಕ್ರಂ ವೇಧಾ ಬಿಡುಗಡೆಯಾಗಿವೆ. ಅದರ ಬೆನ್ನಲ್ಲೇ ಮಾಧವನ್ ವಿಜ್ಞಾನಿ ಎಸ್. ನಂಬಿ ನಾರಾಯಣ್ ಅವರ ಬಯೋಪಿಕ್ ನಲ್ಲಿ ನಟಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ.

ಅಷ್ಟೇ ಅಲ್ಲ ಸುಶಾಂತ್ ಸಿಂಗ್ ರಾಜ್ಪೂತ್ ನಟನೆಯ ‘ಚಂದಮಾಮಾ ದೂರ್ ಕೆ’ ಚಿತ್ರದಲ್ಲೂ ಮಾಧವನ್ ಗಗನಯಾತ್ರಿಯ ಪಾತ್ರ ಮಾಡ್ತಿದ್ದಾರೆ. ನಂಬಿ ನಾರಾಯಣ್ ಬಯೋಪಿಕ್ ಗಾಗಿ  ಮಾಧವನ್, ನಟ ಅಮೀರ್ ಖಾನ್ ಬಳಿ ಸಹಾಯ ಕೇಳಿದ್ದಾರೆ.

ಯುವಕ ಹಾಗೂ ವಯಸ್ಕನ ಅವತಾರದಲ್ಲಿ ಮಾಧವನ್ ಕಾಣಿಸಿಕೊಳ್ಳಬೇಕಿದೆ. ಇದಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು, ಅಮೀರ್ ಖಾನ್ ಬಳಿ ಸಲಹೆ ಕೇಳಿದ್ದಾರೆ. ತೂಕ ಹೆಚ್ಚಿಸಿಕೊಂಡು, ಆ ಪಾತ್ರವನ್ನು ಮೊದಲು ಫಿನಿಶ್ ಮಾಡಿದ್ರೆ, ವೇಯ್ಟ್ ಇಳಿಸಿಕೊಳ್ಳೋದು ಸುಲಭ ಅಂತಾ ಅಮೀರ್ ಸಲಹೆ ನೀಡಿದ್ದಾರಂತೆ.

ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಕೂಡ ಎರಡು ಬಗೆಯ ಪಾತ್ರದಲ್ಲಿ ಅಭಿನಯಿಸಿದ್ದರು. ಯುವಕನಾಗಿ ಹಾಗೂ ಮಧ್ಯವಯಸ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕಾಗಿ ತೂಕ ಹೆಚ್ಚಿಸಿಕೊಂಡು, ಕೇವಲ 6 ತಿಂಗಳುಗಳಲ್ಲೇ ಬೊಜ್ಜು ಇಳಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...