alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಜತೆ ಬೇರೆಯವರ ಸಲುಗೆ ಸಹಿಸಲ್ಲ ಎಂದ ನಟಿ

sushant-ankita

ಬಾಲಿವುಡ್ ನಲ್ಲಿ ಅದೇನಾಗಿದೆಯೋ ದೇವರೇ ಬಲ್ಲ. ಲವ್ ಮಾಡಿದಷ್ಟೇ ವೇಗವಾಗಿ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಇತ್ತೀಚೆಗಂತೂ ಬಾಲಿವುಡ್ ವಲಯದಲ್ಲಿ, ಲವ್, ಬ್ರೇಕ್ ಅಪ್ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿವೆ ಎನ್ನಬಹುದು.

ಬಾಲಿವುಡ್ ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ಕಿರುತೆರೆ ಕಲಾವಿದೆ ಅಂಕಿತಾ ಲೋಖಾಂಡೆ 6 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಅಂಕಿತಾ ಹಾಗೂ ಸುಶಾಂತ್ ಒಟ್ಟಿಗೆ ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ನಾಯಕ, ನಾಯಕಿಯಾಗಿ ನಟಿಸಿದ್ದರು. ಇವರಿಬ್ಬರ ಜೋಡಿ ಜನಪ್ರಿಯವಾಗಿ ವೀಕ್ಷಕರ ಮನಸೆಳೆದಿತ್ತು. ಆ ಧಾರಾವಾಹಿಯಲ್ಲಿ ನಟಿಸುವಾಗಲೇ, ಸುಶಾಂತ್ ಸಿಂಗ್ ಗೆ ಬಾಲಿವುಡ್ ನಿಂದ ಭರ್ಜರಿ ಆಫರ್ ಗಳು ಬಂದವು.

ಹಲವಾರು ಸಿನೆಮಾಗಳಲ್ಲಿ ನಟಿಸಿದ ಸುಶಾಂತ್ ಹಾಗೂ ಅಂಕಿತಾ 6 ವರ್ಷಗಳಿಂದ ಪ್ರೀತಿಸುತ್ತಿದ್ದು, ಅವರು ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದನ್ನು ಅಲ್ಲಗಳೆದಿರುವ ಅಂಕಿತಾ, ನಾವು ಅನ್ಯೋನ್ಯವಾಗಿಯೇ ಇದ್ದೇವೆ ಎಂದು ಹೇಳಿದ್ದಾರೆ. ಸುಶಾಂತ್ ರನ್ನು ನಾನು ಹೆಚ್ಚಾಗಿ ಪ್ರೀತಿಸುತ್ತೇನೆ. ಬೇರೆ ಕಲಾವಿದೆಯರು ಸುಶಾಂತ್ ಜೊತೆಗೆ ಸಲುಗೆಯಿಂದ ಇರುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...