alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಲ್ಲಿ ಈಗ ಮತ್ತೊಂದು ಬ್ರೇಕ್ ಅಪ್

Siddharth-Alia

ಬಾಲಿವುಡ್ ನಲ್ಲಿ ಲವ್ ಮಾಡೋದು, ಅಷ್ಟೇ ವೇಗವಾಗಿ ದೂರವಾಗೋದು ಹೊಸದೇನಲ್ಲ, ಇನ್ನೇನು ಮದುವೆಯಾಗಲಿದ್ದಾರೆ ಎಂದುಕೊಂಡಿದ್ದ ಎಷ್ಟೋ ಜೋಡಿಗಳು ಬೇರೆಯಾಗಿವೆ. ಅಲ್ಲದೇ, ಮದುವೆಯಾದ ನಂತರವೂ ಸಂಬಂಧ ಹಳಸಿದ ಉದಾಹರಣೆಗಳಿವೆ.

 

ಇದೀಗ ಮತ್ತೊಂದು ಜೋಡಿ ಬ್ರೇಕ್ ಅಪ್ ಆಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಆಲಿಯಾ ಭಟ್ ಕರಣ್ ಜೋಹರ್ ನಿರ್ದೇಶನದ ‘ಸ್ಟೂಡೆಂಟ್ ಆಫ್ ದಿ ಇಯರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಆತ್ಮೀಯತೆ ಇತ್ತು. ಇಬ್ಬರೂ ತಾವು ಪ್ರೀತಿಸುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲವಾದರೂ, ಅವರು ಮದುವೆಯಾಗಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿತ್ತು. ಇದೀಗ ಬಂದ ಮಾಹಿತಿಯಂತೆ ಇಬ್ಬರ ನಡುವೆ ವಿರಸ ಮೂಡಿದೆ. ಇದಕ್ಕೆ ಕಾರಣ ಶ್ರದ್ಧಾ ಕಪೂರ್ ಅಂತೆ.

 

ಸಿದ್ಧಾರ್ಥ್ ಈಗ ಶ್ರದ್ಧಾ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಏಕ್ ವಿಲನ್’ ನಲ್ಲಿ ಒಟ್ಟಿಗೆ ನಟಿಸಿದ್ದ ಶ್ರದ್ಧಾ ಹಾಗೂ ಸಿದ್ಧಾರ್ಥ್ ಬಹಳ ಕ್ಲೋಸ್ ಆಗಿದ್ದು, ಇದರಿಂದ ಅಸಮಾಧಾನಗೊಂಡ ಆಲಿಯಾ ಭಟ್ ಆತನಿಂದ ದೂರವಾಗಿದ್ದಾಳೆ. ಇದೇ ವಿಷಯವೀಗ ಬಾಲಿವುಡ್ ಅಂಗಳದಲ್ಲಿ ‘ಟಾಕ್ ಆಫ್ ದ ಟೌನ್’ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...