alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ಚಿಕಿತ್ಸೆ ಬಳಿಕ ಮನಿಷಾ ಹೇಗೆ ಕಾಣ್ತಿದ್ಲು ಗೊತ್ತಾ?

manisha-koirala-548x395

ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಮಹಾಮಾರಿ ಕ್ಯಾನ್ಸರ್ ಗೆದ್ದು ಬಂದಿದ್ದಾಳೆ. ಕ್ಯಾನ್ಸರ್ ಚಿಕಿತ್ಸೆ ನಂತ್ರ ನಾನು ಏಲಿಯನ್ಸ್ ನಂತೆ ಕಾಣ್ತಿದ್ದೆ ಎಂದು ಮನಿಷಾ ಹೇಳಿದ್ದಾಳೆ. ಸದ್ಯ ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸುತ್ತಿರುವ ನಟಿ, ಸಂಜಯ್ ದತ್ ತಾಯಿ ನರ್ಗೀಸ್ ಪಾತ್ರದಲ್ಲಿ ನಟಿಸಲಿದ್ದಾಳೆ.

1942 ಎ ಲವ್ ಸ್ಟೋರಿ, ಅಗ್ನಿ ಸಾಕ್ಷಿ, ಬಾಂಬೆಯಂತಹ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡವಳು ಮನಿಷಾ. 2012 ರಲ್ಲಿ ಮನಿಷಾ ಅಂಡಾಶಯದ ಕ್ಯಾನ್ಸರ್ ನಿಂದ ಬಳಲಿದ್ದಳು. ಕಿಮೋಥೆರಫಿ ನಂತ್ರ ನಿಮ್ಮ ಲುಕ್ ಬದಲಾಗಲಿದೆ ಎಂಬ ಭಯ ನಿಮ್ಮನ್ನು ಕಾಡಿತ್ತಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ನಟಿ, ಕೂದಲು ಉದುರುತ್ತೆ ಎಂಬ ವಿಷಯ ತಿಳಿದಿತ್ತು. ಆದ್ರೆ ಲುಕ್ ಬದಲಾಗುತ್ತೆ ಎಂಬುದು ಗೊತ್ತಿರಲಿಲ್ಲ. ಕೂದಲು ಉದುರಿ ನನ್ನ ರೂಪವೇ ಬದಲಾಗಿತ್ತು. ಗುಣಮುಖವಾಗುವುದೇ ನನ್ನ ಮುಖ್ಯ ಗುರಿಯಾಗಿತ್ತು. ಹಾಗಾಗಿ ನಾನು ಮಾನಸಿಕವಾಗಿ ಸದೃಢವಾಗಲು ಬಯಸಿದ್ದೆ. ನನ್ನ ಕುಟುಂಬ ಸದಾ ನನ್ನ ಜೊತೆಗಿದ್ದು ಶಕ್ತಿ ತುಂಬಿದೆ. ಕಿಮೋಥೆರಪಿ ನಂತ್ರ ಕನ್ನಡಿಯಲ್ಲಿ ನನ್ನ ಮುಖ ನೋಡಿದ್ರೆ ಏಲಿಯನ್ಸ್ ತರ ಕಾಣ್ತಾ ಇದ್ದೆ ಎಂದಿದ್ದಾಳೆ ಮನಿಷಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...