alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ‘ದಿ ವಿಲನ್’ ಕಮಾಲ್

london-dd

ಶಿವರಾಜ್ ಕುಮಾರ್, ಸುದೀಪ್ ಹಾಗೂ ‘ಜೋಗಿ’ ಪ್ರೇಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಚಿತ್ರೀಕರಣ ಲಂಡನ್ ನಲ್ಲಿ ನಡೆದಿದೆ.

ಎಮಿ ಜಾಕ್ಸನ್ ಹಾಗೂ ಸುದೀಪ್ ಪಾಲ್ಗೊಂಡಿದ್ದ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದ್ದು, ಶಿವಣ್ಣ ಕೂಡ ಚಿತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಲಂಡನ್ ನ ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಶಿವಣ್ಣ, ಸುದೀಪ್ ಅಭಿಮಾನಿಗಳಲ್ಲಿ ಮಾತ್ರಲ್ಲದೇ, ಸಿನಿ ರಸಿಕರಲ್ಲಿ ಆರಂಭದಿಂದಲೂ ‘ದಿ ವಿಲನ್’ ಕುತೂಹಲ ಮೂಡಿಸಿದೆ.

ಶಿವಮೊಗ್ಗದ ಹೊಸ ಜೈಲ್, ಬೆಳಗಾವಿಯ ರಾಮದುರ್ಗ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ.

ಶಿವರಾಜ್ ಕುಮಾರ್, ಸುದೀಪ್, ಮಿಥುನ್ ಚಕ್ರವರ್ತಿ, ಎಮಿ ಜಾಕ್ಸನ್, ಮೊದಲಾದವರು ಅಭಿನಯಿಸಿದ್ದಾರೆ. ಲಂಡನ್ ನಲ್ಲಿ ಶೂಟಿಂಗ್ ಭರ್ಜರಿಯಾಗಿ ನಡೆದಿದೆ. ಶಿವಣ್ಣ ಕೂಡ ಆಗಮಿಸಲಿದ್ದಾರೆ ಎಂದು ಪ್ರೇಮ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...