alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನಪಾನ ಮಾಡಿಸಿ ಟ್ರೋಲ್ ಆದ ನಟಿಯನ್ನು ದನಕ್ಕೆ ಹೋಲಿಸಿದ್ರಂತೆ ಜನ

ನಟಿ ಹಾಗೂ ರೂಪದರ್ಶಿ ಲೀಸಾ ಹೇಡನ್ ಹಿಂದಿನ ವರ್ಷ ಮಗುವಿಗೆ ಸ್ತನಪಾನ ಮಾಡಿಸಿ ವಿವಾದಕ್ಕೆ ಕಾರಣವಾಗಿದ್ದಳು. ಲೀಸಾ ಸಾರ್ವಜನಿಕ ಪ್ರದೇಶದಲ್ಲಿ ಸ್ತನಪಾನ ಮಾಡಿಸಿದ್ದನ್ನು ಅನೇಕರು ವಿರೋಧಿಸಿದ್ದರು. ಸ್ತನಪಾನದ ಬಗ್ಗೆ ಎದುರಾಗುವ ಎಲ್ಲ ಸಮಸ್ಯೆಗಳ ಬಗ್ಗೆ ಲೀಸಾ ಈಗ ಮಾತನಾಡಿದ್ದಾಳೆ.

ಲೀಸಾ ಸ್ತನಪಾನ ಮಾಡಿಸುವುದನ್ನು ಇಷ್ಟಪಡ್ತಾಳಂತೆ. ಇದು ಕರ್ತವ್ಯ, ಜವಾಬ್ದಾರಿ ಜೊತೆಗೆ ನೈಸರ್ಗಿಕ ಕ್ರಿಯೆ. ಮಗುವಿಗೆ ಇದ್ರಿಂದ ಸಾಕಷ್ಟು ಉಪಯೋಗವಿದೆ ಎಂದಿದ್ದಾಳೆ ಲೀಸಾ. ಸ್ತನಪಾನದ ಬಗ್ಗೆ ಮುಜುಗರವಾಗುವಂತಹ ಅನೇಕ ಪ್ರಶ್ನೆಗಳನ್ನು ಜನರು ಕೇಳ್ತಾರಂತೆ. ಆದ್ರೆ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾಳೆ ಲೀಸಾ.

ಈಗ್ಲೂ ಸ್ತನಪಾನ ಮಾಡಿಸ್ತಿದ್ದೀಯಾ ಎಂದು ಅನೇಕರು ಪ್ರಶ್ನೆ ಮಾಡ್ತಾರಂತೆ. ಹೌದು, ನನ್ನ ಮಗುವಿಗೆ ಇನ್ನೂ ನಾಲ್ಕು ತಿಂಗಳು. ಮಗು ಆರೋಗ್ಯಕ್ಕೆ ಸ್ತನಪಾನ ಮುಖ್ಯ ಎಂಬುದು ಲೀಸಾ ಉತ್ತರವಂತೆ. ನೀನು ದನವಲ್ಲ. ಮಗುವಿಗೆ ಸ್ತನಪಾನ ಮಾಡಿಸಬೇಡ ಎಂದೂ ಕೆಲವರು ಸಲಹೆ ನೀಡಿದ್ದಾರಂತೆ.

ಅನೇಕ ಕಲಾವಿದರು ಸೌಂದರ್ಯ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಸ್ತನಪಾನ ಮಾಡಿಸುವುದಿಲ್ಲ. ಆದ್ರೆ ಸ್ತನಪಾನ ಮಗುವಿನ ಹಾಗೂ ತಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೊತೆಗೆ ಇಬ್ಬರ ಮಧ್ಯೆ ಒಂದು ಸುಂದರ ಸಂಬಂಧ ಚಿಗುರೊಡೆಯುತ್ತದೆ ಎನ್ನುತ್ತಾಳೆ ಲೀಸಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...